ದೀಪಿಕಾ, ಸೈಫ್ ಆರಕ್ಷಣ್ ಚಿತ್ರಕ್ಕೆ ಹೈಕೋರ್ಟ್ ತಡೆಯಾಜ್ಞೆ
ಈಗಾಗಲೆ ರಾಜಕಾರಣಿಗಳ ಹಾಗೂ ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ಚಿತ್ರ 'ಆರಕ್ಷಣ್' ಚಿತ್ರಕ್ಕೆ ಈಗ ಮತ್ತೊಂದು ವಿವಾದ ಎದುರಾಗಿದೆ. ನಟಿ ದೀಪಿಕಾ ಪಡುಕೋಣೆ ಹಾಗೂ ಸೈಫ್ ಆಲಿ ಖಾನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಬಿಡುಗಡೆಯನ್ನು ಮದ್ರಾಸ್ ಹೈಕೋರ್ಟ್ ತಡೆಹಿಡಿದಿದೆ.
ರು.3.75 ಕೋಟಿ ಬಾಕಿ ಹಣಕ್ಕೆ ಸಂಬಂಧಿಸಿದಂತೆ ಮಧು ಗುಪ್ತ ಹಾಗೂ ಸಿಜಿ ಫೋಟೋ ಲಿಮಿಟೆಡ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಮದ್ರಾಸ್ ಹೈಕೋರ್ಟ್ ಚಿತ್ರ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹಾಗೂ ಮೀಸಲಾತಿ ಬಗೆಗಿನ ಕಥಾವಸ್ತುವನ್ನು ಈ ಚಿತ್ರ ಒಳಗೊಂಡಿದೆ.
ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಸೈಫ್ ಆಲಿ ಖಾನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯಪಾತ್ರಗಳಲ್ಲಿದ್ದಾರೆ. ಚಿತ್ರದ ಬಗ್ಗೆ ವಿವಾದ ತಲೆದೋರಿದ ಕಾರಣ ಕೆಲವು ವಿಶ್ವವಿದ್ಯಾಲಗಳು 'ಆರಕ್ಷಣ್' ಚಿತ್ರತಂಡದ ಪ್ರಚಾರ ನಿಷೇಧಿಸಿದ್ದವು. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. (ಏಜೆನ್ಸೀಸ್)
More from Filmibeat
English summary
Prakash Jha's Aarakshan is in trouble waters. After facing the rage of many politicians and Dalit organisations, the Madras High Court has stayed its release over non-payment of dues. Aarakshan featuring Amitabh Bachchan, Saif Ali Khan and Deepika Padukone has become a topic of discussion, as it is said to be based on reservation in Indian education system.


Click it and Unblock the Notifications











