ಏಪ್ರಿಲ್ ಮೊದಲ ವಾರ ಸೈಫ್-ಕರೀನಾ ಮದುವೆ
ಬಾಲಿವುಡ್ ನ ಬಹು ಚರ್ಚಿತ ಪ್ರೇಮ ಜೋಡಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮದುವೆ ದಿನಾಂಕ ಪಕ್ಕಾ ಆಗಿದೆಯಂತೆ. ಏಪ್ರಿಲ್ ಮೊದಲ ವಾರದಲ್ಲಿ ಇಬ್ಬರು ಹಸೆಮಣೆ ಏರಲಿದ್ದಾರೆ.
ಬಹುನಿರೀಕ್ಷಿತ 'ಏಜೆಂಟ್ ವಿನೋದ್' ಚಿತ್ರದ ಬಿಡುಗಡೆಗಾಗಿ ಇಬ್ಬರು ಕಾದಿದ್ದಾರೆ. ನಂತರ ಇಬ್ಬರು ಮದುವೆಯಾಗಲಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿದೆ.
ಫೆಬ್ರವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಕೊಂಚ ತಡವಾಗಿ ಮಾರ್ಚ್ 23ರ ವೇಳೆಗೆ ಬೆಳ್ಳಿತೆರೆಗೆ ಅಪ್ಪಳಿಸುವ ಸಾಧ್ಯತೆಯಿದೆ. ನಂತರ ನಾವಿಬ್ಬರು ಮದುವೆಯಾಗುತ್ತೇವೆ ಎಂದು ಕರೀನಾ ಹೇಳಿಕೊಂಡಿದ್ದಾಳೆ.
ಏಜೆಂಟ್ ವಿನೋದ್ ಚಿತ್ರ ಮುಗಿಸಿ ಇಬ್ಬರು ಹಾಲಿಡೇ ಮೂಡ್ ನಲ್ಲಿ ಎಲ್ಲೆಡೆ ಸುತ್ತುತ್ತಿದ್ದಾರೆ. ಸೈಫ್ ಅಲಿ ಖಾನ್ ಸ್ವಂತ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಮೇಲೆ ಇಬ್ಬರಿಗೂ ಅಪಾರ ನಿರೀಕ್ಷೆಯಿದೆ.
ಮದುವೆ ನಂತರ ಮಧುಚಂದ್ರಕ್ಕೆ ಸೂಕ್ತ ಸ್ಥಳ ಆಯ್ಕೆ ಹುಡುಕಾಟ ಜಾರಿಯಲ್ಲಿದೆಯಂತೆ. ಕರೀನಾಳಿಗೆ ಲಿವ್ ಇನ್ ಸಂಬಂಧದಲ್ಲೇ ಕಾಲದೂಡುವುದಕ್ಕಿಂತ ಮದುವೆಯಾಗುವುದೇ ಸರಿ ಎನಿಸಿ ಬೇಗ ಮದುವೆಯಾಗೋಣ ಬಾ ಎಂದು ಸೈಫ್ ಗೆ ದುಂಬಾಲು ಬಿದ್ದ ಪರಿಣಾಮ, ಮದುವೆ ಆತುರಾತುರವಾಗಿ ತಯಾರಿ ನಡೆದಿದೆ.


Click it and Unblock the Notifications











