»   » ನಾನು ಹಾಟ್ ಅಂಡ್ ಸೆಕ್ಸಿಯಲ್ಲ: ಕತ್ರಿನಾ ಕೈಫ್

ನಾನು ಹಾಟ್ ಅಂಡ್ ಸೆಕ್ಸಿಯಲ್ಲ: ಕತ್ರಿನಾ ಕೈಫ್

Posted By:
Subscribe to Filmibeat Kannada

ಬಾಲಿವುಡ್ ನ ಅತ್ಯಂತ ಸ್ಫುರದ್ರೂಪಿ ನಟಿಯರಲ್ಲಿ ಕತ್ರಿನಾ ಕೈಫ್ ಸಹ ಒಬ್ಬರು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಗ್ಲಾಮರ್ ಪಾತ್ರಗಳಲ್ಲಿ ಕತ್ರಿನಾ ಕಾಣಿಸಿಕೊಂಡಾಗಲೆಲ್ಲಾ ಪಡ್ಡೆಗಳ ಹೃದಯ ಮೀಟಿದ್ದುಂಟು. ಆದರೆ ತಾನು ನೀವಂದುಕೊಂಡಷ್ಟು ಸುಂದರಿ ಅಲ್ಲ ಎನ್ನುತ್ತಿದ್ದಾರೆ ಕತ್ರಿನಾ ಕೈಫ್.

ಪ್ರೇಕ್ಷಕರು ಪ್ರತಿಯೊಬ್ಬರ ಬಗ್ಗೆಯೂ ತಮ್ಮದೇ ಆದಂತಹ ದೃಷ್ಟಿ ಕೋನವಿಟ್ಟುಕೊಂಡಿರುತ್ತಾರೆ. ಉದಾಹರಣೆಗೆ ಹೇಳಬೇಕೆಂದರೆ, ನಟಿ ವಿದ್ಯಾಬಾಲನ್ ಅವರನ್ನು ಪ್ರೇಕ್ಷಕರು ಸಾಂಸ್ಕೃತಿಕ ಪಾತ್ರಗಳಲ್ಲಿ ಇಷ್ಟಪಡುತ್ತಾರೆ. ಹೀಗೆ ಪ್ರತಿಯೊಬ್ಬರನ್ನು ಅವರದೇ ಆದಂತಹ ದೃಷ್ಟಿಕೋನದಲ್ಲಿ ನೋಡುತ್ತಾರೆ. ಹಾಗಾಗಿ ನಾನು ನಿವು ತಿಳಿದುಕೊಂಡಂತೆ ಹಾಟೂ ಅಲ್ಲ ಸೆಕ್ಸಿನೂ ಅಲ್ಲ ಎಂದಿದ್ದಾರೆ ಕತ್ರಿನಾ.

ಈ ಹಿಂದೆ ಏಷ್ಯಾ ಖಂಡಲ್ಲೇ ಅತ್ಯಂತ ಸೆಕ್ಸಿಯಸ್ಟ್ ಮಹಿಳೆ ಎಂಬ ಅಗ್ರ ಪಟ್ಟ ಕತ್ರಿನಾರನ್ನು ವರಿಸಿತ್ತು. ಈಗ ನೋಡಿದರೆ ಕತ್ರಿನಾ ನಾನು ಸುಂದರಿನೇ ಅಲ್ಲ ಎನ್ನುತ್ತಿದ್ದಾರೆ. ಆದರೆ ಪ್ರೇಕ್ಷಕರು ಮಾತ್ರ ಇದನ್ನು ಸುತಾರಾಂ ಒಪ್ಪುವ ಸ್ಥಿತಿಯಲಿಲ್ಲ.ಆದರೆ ಕತ್ರಿನಾ ಮಾತ್ರ ತಮ್ಮ ಸಹಜ ಸೌಂದರ್ಯದ ಮೂಲಕ ಪ್ರೇಕ್ಷರ ಹೃದಯ ಮಿಡಿಯುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada