ಬಾಲಿವುಡ್ ತಾರೆ ಮಲ್ಲಿಕಾ ಶೆರಾವತ್ ಎದೆಗಾರಿಕೆ
ಸೆಕ್ಸಿ ತಾರೆ ಮಲ್ಲಿಕಾ ಶೆರಾವತ್ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು. ಬಾಲಿವುಡ್‌ನಲ್ಲಿ ಹೇಗೋ ಶೇ.35 ಅಂಕಗಳನ್ನು ಪಡೆದು ಪಾಸಾದ ಮಲ್ಲಿಕಾ ಹಾಲಿವುಡ್‌ನಲ್ಲಿ ಎಡವಿಬಿದ್ದರು. ಈಗ ಆಕೆ ನೋಡೇ ಬಿಡೋಣ ಏನಾಗುತ್ತದೋ ಎಂದು ಎಫ್‌ಎಚ್‌ಎಂ ಏಪ್ರಿಲ್ ಸಂಚಿಕೆಗೆ ಟಾಪ್ ಲೆಸ್ ಆಗಿದ್ದಾರೆ.
ತಮ್ಮಲ್ಲಿನ ಸೆಕ್ಸಿ ಲುಕ್ ಇನ್ನೂ ಎಳ್ಳಷ್ಟೂ ಕಮ್ಮಿಯಾಗಿಲ್ಲ ಎಂಬುದನ್ನು ಬಾಲಿವುಡ್‌ಗೆ ಸಾರಲು ಸಿನಿಮಾ ತಾರೆಗಳು ಆಗಾಗ ಹೀಗೆ ಅರೆಬೆತ್ತಲಾಗುತ್ತಿರುತ್ತಾರೆ. ಒಂದಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ ಎಂಬುದು ಅವರ ಲೆಕ್ಕಾಚಾರ. ಅದೇ ಲೆಕ್ಕಾಚಾರದಲ್ಲಿ ಮಲ್ಲಿಕಾ ಕೂಡ ತಮ್ಮ ಸೌಂದರ್ಯವನ್ನು ಪ್ರದರ್ಶನಕ್ಕಿಟ್ಟಿದ್ದಾರೆ.
ಬಾಲಿವುಡ್‌ನಲ್ಲಿ 'ಹಿಸ್ಸ್' ಚಿತ್ರದ ಬಳಿಕ ಮಲ್ಲಿಕಾಗೆ ಅವಕಾಶಗಳು ಕೈಗೂಡಲಿಲ್ಲ. ಹಾಲಿವುಡ್‌ನಲ್ಲೂ ಪ್ರಯತ್ನಗಳು ನಡೆದವಾದರೂ ಬಂದ ದಾರಿಗೆ ಸುಂಕವಿಲ್ಲ ಎಂಬಂತಾಯಿತು ಆಕೆಯ ಪರಿಸ್ಥಿತಿ. ಈಗ ತಮ್ಮ ಹಳೆ 'ಸೆಕ್ಸ್ ಸಿಂಬಲ್' ಪಟ್ಟವನ್ನು ಮರಳಿ ಪಡೆಯಲು ಮಲ್ಲಿಕಾ ಕೊನೆಯ ಪ್ರಯತ್ನ ಎಂಬಂತಿದೆ. ಕಾದುನೋಡೋಣ ಆಕೆಯ ಎದೆಗಾರಿಕೆ ಫಲ ನೀಡುತ್ತದೋ ಇಲ್ಲವೋ.


Click it and Unblock the Notifications











