ಕಿಸ್ಸಿಂಗ್ ಸ್ಟಾರ್ ಬೇರ್ ಬ್ಯೂಟಿ ಚಿಂದಿ ಪೋಸ್ಟರ್
ಇಮ್ರಾನ್ ಹಶ್ಮಿಗೆ ಮಲ್ಲಿಕಾ ಶೆರಾವತ್ ಜೋಡಿ ಮಾಡಿ ಮರ್ಡರ್ ಎಂಬ ಚಿತ್ರವನ್ನು ನಿರ್ಮಿಸಿದ ಭಟ್ ಕುಟುಂಬ ಈಗ ಮತ್ತೊಮ್ಮೆ ಅದೇ ಮೋಡಿ ಮಾಡಲು ಎಲ್ಲ ರೀತಿ ತಯಾರಿ ನಡೆಸಿದೆ. ಜುಲೈ 8 ರಂದು ತೆರೆ ಕಾಣಲಿರುವ ಮರ್ಡರ್ 2 ಚಿತ್ರದ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿರುವ ಭಟ್ ಸಾಹೇಬ್ರು ಸಾಮಾಜಿಕ ಜಾಲ ತಾಣಗಳ ಮೊರೆ ಹೊಕ್ಕಿದ್ದಾರೆ.
ಚಿತ್ರದ ಕೆಲವು ಪೋಸ್ಟರ್ ಗಳನ್ನು ಆನ್ ಲೈನ್ ಪ್ರಸಾರ ಮಾಡಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಚಿತ್ರದ ಮೇನ್ ಪೋಸ್ಟರ್ ಯಾವುದು ಎಂದು ಘೋಷಿಸಲಾಗುವುದು ಎಂದು ವಿಕ್ರಮ್ ಭಟ್ ಹೇಳುತ್ತಾರೆ. ಆದರೆ, ನಿರ್ದೇಶಕ ಮೋಹಿತ್ ಸೂರಿಗೆ ಈ ಐಡಿಯಾ ಅಷ್ಟು ಇಷ್ಟ ಆಗಿಲ್ಲ. ಎಲ್ಲಾ ಪೋಸ್ಟರ್ ಗಳನ್ನು ಒಮ್ಮೆಗೆ ಪ್ರದರ್ಶಿಸಿದರೆ ಜನರಿಗೆ ಕುತೂಹಲವಿರುವುದಿಲ್ಲ ಎಂಬುದು ಸೂರಿ ವಾದ. ಆದರೆ ಜನತೆಯ ಅಭಿಪ್ರಾಯ ಸಂಗ್ರಹಕ್ಕೆ ಇಬ್ಬರು ಕಾದಿದ್ದಾರೆ.

ಪೋಸ್ಟರ್ ಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ರಸಿಕರ ಕಂಗಳ ಸೆಳೆಯುವಂತಿದೆ. ಅಭಿಮಾನಿಗಳು ತಮಗಿಷ್ಟವಾದ ಪೋಸ್ಟರ್ ಗೆ ತಮ್ಮ ಮತ ಹಾಕಬಹುದು. ಮರ್ಡರ್ 2 ನ ಟ್ರೈಲರ್ ಕೂಡಾ ಟ್ವಿಟ್ಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಮಹೇಶ್ ಭಟ್, ವಿಕ್ರಮ್ ಭಟ್ ಟ್ವಿಟ್ಟರ್ ಖಾತೆಗೆ ಭಾರಿ ಪ್ರತಿಕ್ರಿಯೆಗಳು ಬರತೊಡಗಿದೆ.
ಇಷ್ಟಕ್ಕೂ ಏನಿದೆ ಈ ಪೋಸ್ಟರ್ ಗಳಲ್ಲಿ ಶ್ರೀಲಂಕಾದ ಸುಂದರಿ ಜಾಕ್ವಲಿನ್ ತೆರೆದ ಬೆನ್ನು, ಅರೆ ಬೆತ್ತಲೆ ಅಪ್ಪುಗೆ ದೃಶ್ಯ, ಗ್ರಾಫಿಕ್ ಮಿಶ್ರಿತ ಹಿನ್ನೆಲೆಯಲ್ಲಿ ಕಿಸ್ಸಿಂಗ್ ಸ್ಟಾರ್ ಹಶ್ಮಿ ಹಾಗೂ ಜಾಕ್ವಲಿನ್ ಜೋಡಿ ಇರುವ ಪೋಸ್ಟರ್ ಗಳು ಈಗಾಗಲೇ ಸಂಪ್ರದಾಯವಾದಿಗಳ ಕಂಗೆಣ್ಣಿಗೆ ಗುರಿಯಾಗಿದೆ. ರಸಿಕರ ಕಣ್ಣು ತಂಪಾಗಿಸಿವೆ. ಚಿತ್ರಕ್ಕೂ ಮುನ್ನ ಹೇಗೆ ಪ್ರಚಾರ ಮಾಡಬೇಕು ಎನ್ನುವ ಕಲೆ ಭಟ್ ಸಾಹೇಬ್ರೆಗೆ ಕರಗತವಾಗಿದೆ ಎನ್ನುತ್ತಿದೆ ಬಾಲಿವುಡ್


Click it and Unblock the Notifications











