For Quick Alerts
  ALLOW NOTIFICATIONS  
  For Daily Alerts

  ಕೊಲೆ ಕೇಸ್ ನಲ್ಲಿ ಸಿಲುಕಿದ ಮೀರಾ ಇನ್ ಡೀಪ್ ಟ್ರಬಲ್

  By Mahesh
  |

  ದೆಹಲಿ ಮೂಲದ ಮಾಜಿ ರೂಪದರ್ಶಿ, ನಟಿ ಮೀರಾ ಛೋಪ್ರಾ 'ಬ್ಯೂಟಿ ವಿಥ್ ಬ್ರೈನ್' ಎಂದು ಹೊಗಳಿಸಿಕೊಂಡಿದ್ದಳು. ಆದರೆ, ರುಚಿ ಭುಟ್ಟಾನ್ (28) ಎಂಬ ದೆಹಲಿ ಮೂಲದ ವಿವಾಹಿತ ಮಹಿಳೆ ಕೊಲೆ ಕೇಸ್ ನಲ್ಲಿ ಸಿಕ್ಕಿಕೊಂಡಿರುವ ಮೀರಾಳಿಗೆ ಜಾಮೀನು ಸಿಗುವುದು ಕಷ್ಟವಾಗಿದೆ.

  ನಿರೀಕ್ಷಣಾ ಜಾಮೀನು ಅರ್ಜಿ ಹಾಕಿರುವ ಮೀರಾ ಪರ ವಕೀಲರು ಕೋರ್ಟ್ ಆವರಣದಲ್ಲಿ ಶತಪಥ ಹಾಕುತ್ತಿದ್ದಾರೆ. ಗುರ ಗಾಂವ್ ಪೊಲೀಸರು ಕೋರ್ಟ್ ಆದೇಶದಂತೆ ಜಾಮೀನು ರಹಿತ ಬಂಧನ ವಾರೆಂಟ್ ಹಿಡಿದುಕೊಂಡು ಮೀರಾಳಿಗಾಗಿ ಹುಡುಕಾಟ ನಡೆಸಿದ್ದಾರೆ.

  ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿಯಾಗಿರುವ ಮೀರಾ ತೆಲುಗು, ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದಳು. ರುಚಿ ಪತಿ ಸುಮಿತ್ ಜೊತೆ ಮೀರಾ ಅನೈತಿಕ ಸಂಬಂಧ ಹೊಂದಿದ್ದಳು. ಇದು ರುಚಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ರುಚಿ ತಾಯಿ ಸುಧಾ ಗುಪ್ತಾ ಪೊಲೀಸರಿಗೆ ದೂರು ನೀಡಿದ್ದರು.

  ಅಮೆರಿಕದ ಮಿಚಿಗಾನ್ ಸಗಿನಾ ವ್ಯಾಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಮೀರಾ, ನ್ಯೂಯಾರ್ಕ್ ನಲ್ಲಿ ಸಮೂಹ ಮಾಧ್ಯಮ ಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿದ್ದಾರೆ.ರಾಷ್ಟ್ರೀಯ ವಾರ್ತಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.ನಂತರ ಅಲ್ಲಿಂದ ರೂಪದರ್ಶಿಯಾಗಿ ಕೆಲಕಾಲ ಕಳೆದು ನಂತರ ಚಿತ್ರರಂಗಕ್ಕೆ ಕಾಲಿರಿಸಿದ್ದರು.

  ಕನ್ನಡದಲ್ಲಿ ದರ್ಶನ್ ಜೊತೆ ಅರ್ಜುನ್ ಚಿತ್ರ ಸೇರಿದಂತೆ ತಮಿಳು, ತೆಲುಗು ಚಿತ್ರರಂಗದಲ್ಲಿ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ 26 ವರ್ಷದ ಮೀರಾ ಟಾಲಿವುಡ್ ನಲ್ಲಿ ನೀಲಾ ಎಂದು ಪರಿಚಿತ. ಈಗ ಕೊಲೆ ಕೇಸ್ ನಲ್ಲಿ ಸಿಕ್ಕಿಕೊಂಡಿರುವ ಮೀರಾಳ ಸಹಾಯಕ್ಕೆ ಯಾವ ಚಿತ್ರರಂಗವೂ ಕೈ ಚಾಚಿಲ್ಲ. ಸ್ವತಃ ಕಸಿನ್ ಪ್ರಿಯಾಂಕಾ ಕೂಡಾ ಕ್ಯಾರೇ ಅಂದಿಲ್ಲ.

  English summary
  Bollywood actress Meera Chopra has moved to High Court to seek anticipatory bail in the Ruchi murder case. Meera is Actress Priyanka Chopra's cousin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X