For Quick Alerts
  ALLOW NOTIFICATIONS  
  For Daily Alerts

  ಹಾಕಿ ಮಾಂತ್ರಿಕನ ಪಾತ್ರದಲ್ಲಿ ಶಾರುಖ್ ಖಾನ್

  |

  ಹಾಕಿ ಮಾಂತ್ರಿಕ, ದಂತಕಥೆ ಧ್ಯಾನ್ ಚಂದ್ ಪಾತ್ರವನ್ನು ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಧ್ಯಾನ್ ಚಂದ್ ಜೀವನಚರಿತ್ರೆಯನ್ನಾಧರಿಸಿದ ಈ ಚಿತ್ರ ಸದಯದಲ್ಲೇ ಸೆಟ್ಟೇರಲಿದ್ದು ಅವರ ಪಾತ್ರವನ್ನು ಶಾರುಖ್ ನಿರ್ವಹಿಸಲಿದ್ದಾರೆ. ಈ ವಿಷಯವನ್ನು ಸ್ವತಃ ಶಾರುಖ್ ಖಾನ್ ವೆಬ್ ಸೈಟ್ ಒಂದಕ್ಕೆ ತಿಳಿಸಿದ್ದಾರೆ.

  ಶಾಲೆ-ಕಾಲೇಜು ದಿನಗಳಲ್ಲಿ ನಾನೊಬ್ಬ ಆಟಗಾರನಾಗಿದ್ದೆ. ಆಗ ಹಾಕಿ ಆಟವನ್ನು ಆಡಿದ್ದೆ ಕೂಡ. ಜೊತೆಗೆ ನಾನು ಹಾಕಿ ಆಡದ ಪ್ರೇಮಿಯೂ ಹೌದು. ಕಾಲೇಜಿನಲ್ಲಿ ಹಾಕಿ ಮತ್ತು ಸ್ನೂಕರ್ ಟೀಮ್ ಕ್ಯಾಪ್ಟನ್ ಆಗಿದ್ದ ಶಾರುಖ್, ಸೂಪರ್ ಹಿಟ್ ಚಿತ್ರ 'ಚಕ್ ದೆ' ನಲ್ಲಿ ತಮ್ಮ ಹಾಲಿ ಕೌಶಲ್ಯ ಮೆರೆದಿದ್ದಾರೆ. ಆಶ್ಚರ್ಯವೆಂದರೆ ಈಗ ಹಾಕಿ ಆಟಗಾರನೊಬ್ಬನ ಪಾತ್ರ ಅವರನ್ನೇ ಹುಡುಕಿಕೊಂಡು ಬಂದಿದೆ.

  ಇತ್ತೀಚಿಗೆ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರಿಗೆ ಭಾರತರತ್ನ ಪ್ರಶಸ್ತಿ ಕೊಡಬೇಕೆಂಬ ಮಾತು ಧ್ವನಿಸುತ್ತಿದೆ. ಇದೇ ವೇಳೆ, ಧ್ಯಾನ್ ಚಂದ್ ಚಿತ್ರವನ್ನು ನಿರ್ಮಾಣ ಮಾಡಿ ತೆರೆಗೆ ತರಲು ಮನಮೋಹನ್ ಶೇಟ್ಟಿಯ ವಾಕ್ ವಾಟರ್ ಮೀಡಿಯಾ ಮೂಲಕ ಸತ್ಯಜಿತ್ ಪುರಿ ಆಸಕ್ತಿ ತೋರಿಸಿದ್ದಾರೆ. ಶಾರುಖ್ ಖಾನ್ ಗೆ ಆಫರ್ ಬಂದಿದೆ. ಮುಂದಿನದೆಲ್ಲ ಮುಂದೆ ನಿರ್ಧಾರವಾಗಬೇಕಿದೆ. (ಏಜೆನ್ಸೀಸ್)

  English summary
  Shahrukh Khan has told a website that he has been approached for a movie based on the life of legendary hockey player Dhyan Chand.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X