ಅಂಬಿ ವ್ಯಾಲಿಯಲ್ಲಿ ವಿವೇಕ್, ಪ್ರಿಯಾಂಕಾ ಮಧುಚಂದ್ರ
ಪ್ರಿಯಾಂಕಾ ಆಳ್ವ ಅವರನ್ನು ಮದುವೆಯಾದ ಬಳಿಕ ಬಾಲಿವುಡ್ ನಟ ವಿವೇಕ್ ಒಬೆರಾಯ್ ಹನಿಮೂನ್ ಈಗಲೇ ಇಲ್ಲ. ಕೊಂಚ ತಡವಾಗಿ ಆಚರಿಸಿಕೊಳ್ತೀನಿ ಎಂದಿದ್ದರು. ಈಗ ಪ್ರಿಯಾಂಕಾ ಜೊತೆಗೆ ಮಧುಚಂದ್ರ ಆಚರಿಸಿಕೊಳ್ಳಲು ಕಾಲ ಕೂಡಿಬಂದಿದೆ ಅನ್ನಿಸುತ್ತದೆ.
ಪಶ್ಚಿಮ ಘಟ್ಟಗಳ ಸಹ್ಯಾದ್ರಿಯ ಸಾಲಿನ ಅಂಬಿ ವ್ಯಾಲಿಯಲ್ಲಿ ವಿವೇಕ್ ಮತ್ತು ಪ್ರಿಯಾಂಕಾ ಹಾಯಾಗಿ ಕಳೆಯಲಿದ್ದಾರೆ. ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಅಂಬಿ ವ್ಯಾಲಿಯಲ್ಲಿ ವಿವೇಕ್, ಪ್ರಿಯಾಂಕಾ ಮಧುಚಂದ್ರಕೆ ಮಧು ಮಂಚ ರೆಡಿಯಾಗಿದೆ. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು...!
ಅಕ್ಟೋಬರ್ 29ರಂದು ವಿವೇಕ್ ಮದುವೆಯಾದ ಬಳಿಕ ವಿವೇಕ್ ತನ್ನ ಪತ್ನಿ ಪ್ರಿಯಾಂಕಾ ಜೊತೆ ಹಾಯಾಗಿ ಕಳೆಯಳು 3 ಬೆಡ್ ರೂಂ ಪ್ಲಾಟನ್ನು ಉಡುಗೊರೆಯಾಗಿ ವಿವೇಕ್ ತಂದೆ ತಾಯಿ ನೀಡಿದ್ದಾರೆ. ಅಲ್ಲಿ ಪ್ರಥಮ ರಾತ್ರಿಗಳನ್ನು ಕಳೆದಿರುವ ವಿವೇಕ್ ಈಗ 'ಮಧು' (ಚಂದ್ರ) ಹೀರಲು ಅಂಬಿ ವ್ಯಾಲಿಗೆ ಹಾರುವ ಹವಣಿಕೆಯಲ್ಲಿದ್ದಾರೆ.
ವಿವೇಕ್ ಒಬೆರಾಯ್ ಪ್ರಿಯಾಂಕಾ ಆಳ್ವ ಮಧುಚಂದ್ರ ಅಂಬಿ ವ್ಯಾಲಿ ಹನಿಮೂನ್ vivek oberoi priyanka alva honeymoon aambey valley bollywood


Click it and Unblock the Notifications