ಲಲನೆಯರ ಜೊತೆ ತುಂಟಾಟ ಒಪ್ಪಿಕೊಂಡ ಬ್ಯಾಡ್ ಬಾಯ್
ಈ ರೀತಿ ಹೇಳಿರುವವರು ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಹಾಗೂ ಒಂದು ಕಾಲದಲ್ಲಿ ಬ್ಯಾಡ್ ಬಾಯ್ ಅನ್ನಿಸಿಕೊಂಡಿದ್ದ ಸಲ್ಮಾನ್ ಖಾನ್. ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಲ್ಲು ತಮ್ಮ ಹಳೆಯ ಪ್ರೇಮ್ ಕಹಾನಿಯನ್ನು ಬಿಚ್ಚಿಟ್ಟಿದ್ದಾನೆ.
ಒಂದು ಕಾಲದಲ್ಲಿ ಮುದ್ದಾದ ಹುಡುಗಿಯರ ಜೊತೆ ತುಂಟಾಟ ಆಡುತ್ತಿದ್ದದ್ದು ನಿಜ. ಆದರೆ ಈಗ ಲಲನೆಯರನ್ನು ಬೀಳಿಸುವ ಕಲೆ ತಮ್ಮಲ್ಲಿಲ್ಲ ಎಂದು ಸತ್ಯ ಒಪ್ಪಿಕೊಂಡಿದ್ದಾನೆ. ಸಲ್ಲು ಪ್ರೇಮದ ಬಲೆಗೆ ಬಿದ್ದ ಕೊನೆಯ ಲಲನಾಮಣಿ ಕತ್ರಿನಾ ಕೈಫ್. ಬಳಿಕ ಅವರಿಬ್ಬರ ಗೆಳೆತನವೂ ಜಾಸ್ತಿ ದಿನಗಳ ಕಾಲ ಉಳಿಯಲಿಲ್ಲ.
ಬಾಲಿವುಡ್‌ನ ಒಂದು ಕಾಲದ ಬ್ಯೂಟಿಗಳಾದ ಸೋಮಿ ಆಲಿ, ಸಂಗೀತಾ ಬಿಜಲಾನಿ ಹಾಗೂ ಐಶ್ವರ್ಯ ರೈ ಕೂಡ ಸಲ್ಲು ಪ್ರೇಮ ಬಾಣಗಳಿಗೆ ಬಲಿಯಾಗಿದ್ದರು. ವಯಸ್ಸು ಅರ್ಧ ಸೆಂಚುರಿಗೆ ಹತ್ತಿರವಾಗುತ್ತಿದ್ದರೂ ಸಲ್ಲುಗೆ ಇನ್ನೂ ಕಂಕಣಭಾಗ್ಯ ಕೂಡಿಬಂದಿಲ್ಲ. ಸಲ್ಲು ಅವರ ಅಪ್ಪ ಮೊಮ್ಮಕ್ಕಳನ್ನು ಕಾಣುವ ಕನಸು ಇನ್ನೂ ದೂರವೇ ಉಳಿದಿದೆ. (ಏಜೆನ್ಸೀಸ್)
More from Filmibeat
English summary
Badboy fame Bollywood star Salman Khan admits that he has dated several pretty girls in past and is now in no mood to date any one. Salman even admitted that he has now forgotten the art of flattering girls.


Click it and Unblock the Notifications











