For Quick Alerts
  ALLOW NOTIFICATIONS  
  For Daily Alerts

  ಮಂಗಳೂರು ಕುಡಿ ಶಿಲ್ಪಾ ಶೆಟ್ಟಿಗೆ ಸೀಮಂತ ಸಂಭ್ರಮ

  By Rajendra
  |

  ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಕಂದನ ನಿರೀಕ್ಷೆಯಲ್ಲಿದ್ದು ಅವರಿಗೀಗ ನವ ಮಾಸಗಳು ತುಂಬಿವೆ. ಮುಂಬೈನ ರಾಜ್ ಕುಂದ್ರಾ ನಿವಾಸದಲ್ಲಿ ಸೀಮಂತ ಸಂಭ್ರಮ ನೆರವೇರಲಿದೆ. ಸಂಪ್ರದಾಯಕ್ಕೆ ಹೆಸರಾಗಿರುವ ಶಿಲ್ಪಾ ಕುಟುಂಬಿಕರು ಸೀಮಂತಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಮೇ 3ರಂದು ಶಿಲ್ಪಾ ಶೆಟ್ಟಿಗೆ ಸೀಮಂತ ಸಂಭ್ರಮ.

  ಈ ವರ್ಣರಂಜಿತ ಸಮಾರಂಭಕ್ಕೆ ಬಾಲಿವುಡ್‌ನ ಹಲವು ತಾರೆಗಳು ಆಗಮಿಸುತ್ತಿದ್ದು ಶಿಲ್ಪಾಗೆ ಶುಭಕೋರಲಿದ್ದಾರೆ. ಮಾನ್ಯತಾ ದತ್, ರವೀನಾ ಟಂಡನ್ ಸೇರಿದಂತೆ ಹಲವು ತಾರೆಗಳಿಗೆ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಕೇವಲ ಮಹಿಳೆಯರನ್ನು ಮಾತ್ರ ಆಹ್ವಾನಿಸಲಾಗಿದ್ದು ಪುರುಷರಿಗೆ ನೋ ಎಂಟ್ರಿ.

  ಶಿಲ್ಪಾ ಶೆಟ್ಟಿ ಸೀಮಂತ ಸಂಭ್ರಮದ ಉಸ್ತುವಾರಿಯನ್ನು ಆಕೆಯ ತಂಗಿ ಶಮಿತಾ ನೋಡಿಕೊಳ್ಳಲಿದ್ದಾರೆ. ಇದಕ್ಕಾಗಿ ಆಕೆ ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಂಡಿದ್ದು ಎಲ್ಲರಿಗೂ ಸರ್ಪ್ರೈಸ್ ನೀಡುವುದಾಗಿ ತಿಳಿಸಿದ್ದಾರೆ. ಅಕ್ಕನ ಸೀಮಂತಕ್ಕೆ ಶಮಿತಾ ಕಾತುರದಿಂದ ಎದುರು ನೋಡುತ್ತಿರುವುದಾಗಿ ಟ್ವೀಟಿಸಿದ್ದಾರೆ. (ಏಜೆನ್ಸೀಸ್)

  English summary
  Bollywood actress Shilpa Shetty in on the ninth month of her pregnancy and she is all get for a grand baby shower. The ceremony is likely to take place at the Kundra’s residence in Mumbai on May 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X