ಅಮೀರ್ ಖಾನ್ ಗೆ ಸಿಕ್ಕಾಪಟ್ಟೆ ಚಳಿ ಜ್ವರ
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ 103 ಡಿಗ್ರಿಗಳ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಇದೇ ಶುಕ್ರವಾರ (ಆ.13) ಅಮೀರ್ ನಿರ್ಮಾಣದ 'ಪೀಪ್ಲಿ ಲೈವ್' ಚಿತ್ರ ಬಿಡುಗಡೆಯಾಗುತ್ತಿದೆ. ಜ್ವರದ ಕಾರಣ ಚಿತ್ರದ ಪ್ರಚಾರಕಾರ್ಯಕ್ಕೆ ಅಮೀರ್ ಗೈರುಹಾಜರಾಗಿದ್ದರು.
ವೈದ್ಯರು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಅಮೀರ್ ಗೆ ಸಲಹೆ ಕೊಟ್ಟಿದ್ದಾರೆ. "ನನ್ನ ಸಿನಿಮಾ ಬಿಡುಗಡೆ ಕೆಲವೆ ದಿನಗಳಿದ್ದರು ಹಾಸಿಗೆ ಬಿಟ್ಟು ಏಳುವ ಸ್ಥಿತಿಯಲಿಲ್ಲ. ಎಲ್ಲಾ ಪ್ರಚಾರ ಕಾರ್ಯಗಳನ್ನು ರದ್ದು ಮಾಡಿಕೊಂಡಿದ್ದೇನೆ" ಎಂದು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.
ಅಮೀರ್ ಶನಿವಾರವಷ್ಟೆ ಆಸ್ಟ್ರೇಲಿಯಾದಿಂದ ಹಿಂತಿರುಗಿದ್ದರು. ಬಳಿಕ ಅವರ ಆರೋಗ್ಯ ಹದಗೆಟ್ಟು ಚಳಿಜ್ವರದಿಂದ ಬಳಲುತ್ತಿದ್ದಾರೆ. ಗಂಟಲು ಸೋಂಕು ಇರುವ ಕಾರಣ ರಕ್ತಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾಗಿ ತಿಳಿದುಬಂದಿದೆ. ಅಮೀರ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಹಾರೈಸುತ್ತ್ತಿದ್ದಾರೆ.
ಅಮೀರ್ ಖಾನ್ ಚಳಿಜ್ವರ ಪೀಪ್ಲಿ ಲೈವ್ ಬಾಲಿವುಡ್ ಕಿರಣ್ ರಾವ್ ಅನಾರೋಗ್ಯ ಆರೋಗ್ಯ aamir khan viral fever peepli live kiran rao health


Click it and Unblock the Notifications