ಹೆತ್ತಪ್ಪನನ್ನು ಕೊಂದ ಬಾಲಿವುಡ್ ನಟ ಅನುಜ್

By Mahesh

Actor Anuj Tikku
ಮುಂಬೈ, ಏ.10: ಹಿಂದಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಅಷ್ಟೇನೂ ಜನಪ್ರಿಯವಲ್ಲದ ನಟನಾಗಿದ್ದ ಅನುಜ್ ಟಿಕ್ಕಾ ಕಳೆದ ಎರಡು ದಿನಗಳಿಂದ ಸುದ್ದಿ ವಾಹನಿಗಳ ಪ್ರೈಮ್ ನ್ಯೂಸ್ ಗಳಲ್ಲೂ ಅನುಜ್ ನದ್ದೇ ಸುದ್ದಿ.

ನಟನೆ ಜೊತೆಗೆ ಜಾಹೀರಾತು ಪ್ರಪಂಚದಲ್ಲೂ ಹೆಸರುವಾಸಿಯಾಗಿದ್ದ ಅನುಜ್ ತನ್ನ ತಂದೆಯನ್ನು ಏತಕ್ಕೆ ಕೊಂದ ಎಂಬುದು ಓಶಿವಾರಾ ಠಾಣೆ ಪೊಲೀಸರಿಗೂ ಇನ್ನೂ ತಿಳಿದು ಬಂದಿಲ್ಲ.

ಗಾಜಿಯಾಬಾದ್ ಮೂಲದ ಉದ್ಯಮಿ ಅರುಣ್ ಟಿಕ್ಕು(61) ಮುಂಬೈಗೆ ಬಂದು ನೆಲೆಸಿದ್ದರು. ಟಿವಿ ಜಾಹೀರಾತು, ರೇಡಿಯೋ ಗಳ ಆಡ್ಸ್ ಡೀಲ್ ಮಾಡುವ ಕಂಪನಿ ಆರಂಭಿಸಿದ್ದ ಅನುಜ್ ಗೆ ಅರುಣ್ ಸರಿಯಾದ ಬೆಂಬಲ ನೀಡಲಿಲ್ಲ ಎನ್ನಲಾಗಿದೆ.

ಅರುಣ್ ಕುಮಾರ್ ಅವರನ್ನು ಹಲವು ಬಾರಿ ಇರಿದು ಕೊಲ್ಲಲಾಗಿದೆ. ನಾವು ಮನೆಗೆ ಹೋದಾಗ ಹೊರಗಿನಿಂದ ಬಾಗಿಲು ಹಾಕಲಾಗಿತ್ತು. ರೂಮ್ ಒಂದರಲ್ಲಿ ಅರುಣ್ ಅವರ ಶವ ಪತ್ತೆಯಾಯಿತು ಎಂದು ಓಶಿವಾರಾ ಪೊಲೀಸ್ ಠಾಣಾಧಿಕಾರಿ ಡಿಕೆ ರುಪ್ವತೆ ಹೇಳಿದ್ದಾರೆ.

ಅನುಜ್ ಜೊತೆ ಕೊಲೆಯಲ್ಲಿ ಭಾಗಿಯಾಗಿರುವ ಇನ್ನಿಬ್ಬರಿಗಾಗಿ ಹುಡುಕಾಟ ಜಾರಿಯಲ್ಲಿದೆ. ಕೊಲೆಗೈದ ಪರಾರಿಯಾಗುವ ಸಂದರ್ಭದಲ್ಲಿ ಮೂವರನ್ನು ಕಂಡ ವಾಚ್ ಮನ್ ಇಬ್ಬರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾನೆ. ಆದರೆ, ಪೊಲೀಸರು ಬರುವಷ್ಟರಲ್ಲಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಯಾರಿದು ಅನುಜ್ : ರಬ್ ನೇ ಬನಾದಿ ಜೋಡಿ, ನೋ ಒನ್ ಕಿಲ್ಡ್ ಜೆಸ್ಸಿಕಾ, ರಣ್ ಚಿತ್ರಗಳಲ್ಲಿ ನಟಿಸಿದ್ದಾರೆ. Mind Bubbles creative firm ನ ಸಿಇಒ ಆಗಿದ್ದ. ಬಿಗ್ ಎಫ್ ಎಂ, ರೆಡ್ ಎಫ್ ಎಂ ವಾಹಿನಿಗಳಲ್ಲಿ ರೇಡಿಯೋ ಜಾಕಿ ಆಗಿ ಕೂಡಾ ಜನಪ್ರಿಯನಾಗಿದ್ದ.

More from Filmibeat

English summary
Anuj Tikka, a Bollywood actor and a well-known face in the advertisement industry, has been arrested over his father's murder case. Oshiwara police in Mumbai arrested Anuj at Andheri on Saturday, Apr 7.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X