ನಿಶ್ಚಿತಾರ್ಥ ಫಿಕ್ಸ್ : ಇಶಾ ಡಿಯೋಲ್ ಪಾಲಿನ ಸಾಧನೆ
ಬಾಲಿವುಡ್ ನಟಿ ಇಶಾ ಡಿಯೋಲ್ ತಮ್ಮ ಜೀವನ ಮಹತ್ಸಾಧನೆ ಮೆರೆಯುವ ಸನ್ನಾಹದಲ್ಲಿದ್ದಾರೆ. ಆರಕ್ಕೇರದ ಮೂರಕ್ಕಿಳಿಯದ ಇಶಾಳನ್ನು ವರಿಸಲು ಆಕೆಯ ಬಾಯ್ ಫ್ರೆಂಡ್ ಉದ್ಯಮಿ ಭರತ್ ತಖ್ತಾನಿ ಒಪ್ಪಿಗೆ ಸೂಚಿಸಿದ್ದಾನೆ. ಫೆ.12 ರಂದು ಈ ಯುವಪ್ರೇಮಿಗಳು ನಿಶ್ಚಿತಾರ್ಥ ಬಂಧನಕ್ಕೆ ಒಳಪಡಲಿದ್ದಾರೆ.
ಅಮ್ಮ ಡ್ರೀಮ್ ಗರ್ಲ್ ಹೇಮಾಮಾಲಿನಿ ಹಾಗೂ ಅಪ್ಪ ಮ್ಯಾಚೋಮ್ಯಾನ್ ಧರ್ಮೇಂದ್ರ ಅವ ಮುದ್ದಿನ ಮಗಳು ಇಶಾ ಅತ್ತಕಡೆ ನಟನೆಯಲ್ಲೂ ಮಿಂಚದೆ ಇತ್ತಕಡೆ ನೃತ್ಯದಲ್ಲೂ ಪಳಗದೆ ವೃತ್ತಿ ಜೀವನವನ್ನು ಡೋಲಾಯಮಾನ ಸ್ಥಿತಿಗೆ ತಳ್ಳಿ ಸುಮ್ಮನೆ ಕೂತಿದ್ದಳು.
ಇಶಾ ತಮ್ಮ ತಾಯಿ ನಿರ್ದೇಶಿಸಿದ ಟೆಲ್ ಮಿ ಓ ಖುದಾ(2011) ಚಿತ್ರ ಬಿಡುಗಡೆ ನಂತರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ, ಫೆ.12 ರಂದು ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆ ನಡೆದಿದೆ.
ಮದುವೆ ದಿನಾಂಕ ಇನ್ನೂ ಫಿಕ್ಸ್ ಮಾಡಿಲ್ಲ. ಶುಭ ಮಹೂರ್ತಕ್ಕೆ ಕಾದಿದ್ದೇವೆ. ಒಳ್ಳೆ ದಿನ ಸಿಕ್ಕ ನಂತರ ಪ್ರಕಟಿಸುತ್ತೇವೆ. ನನಗಂತೂ ಮದುವೆಗೆ ಎರಡೂ ಮನೆ ಕಡೆ ಪೋಷಕರು ಒಪ್ಪಿರುವುದು ಸಂತಸ ತಂದಿದೆ ಎಂದು ಇಶಾ ಹೇಳಿದ್ದಾಳೆ.
ಮದುವೆ ನಂತರ ನಟಿಸುವ ಹಾಗೂ ನರ್ತಿಸುವ ಬಗ್ಗೆ ಯಾವುದೇ ಇಶಾ ಮಾಹಿತಿ ನೀಡಿಲ್ಲ. ಇಶಾ ನಂತರ ಅಹನಾಳನ್ನು ಚಿತ್ರರಂಗದಲ್ಲಿ ಬೆಳೆಸುವ ಇರಾದೆ ಹೇಮಾಮಾಲಿನಿಗೆ ಇದೆ ಎನ್ನಲಾಗಿದೆ.


Click it and Unblock the Notifications











