ಅಮಿತಾಬ್ ಗೆ ಚಲನಚಿತ್ರೋತ್ಸವದಲ್ಲಿ ಗೌರವಾರ್ಪಣೆ
ಪುಣೆ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಗೌರವ ಸಮರ್ಪಣೆ ಮಾಡಲು ನಿರ್ಧರಿಸಲಾಗಿದೆ. ಅವರು ಸಿನಿಮಾಗೆ ನೀಡಿರುವ ಅಪರಿಮಿತ ಕೊಡುಗೆಗೆ ಈ ಗೌರವವನ್ನು ನೀಡಲು ನಿರ್ಧರಿಸಲಾಗಿದೆ. ಇದನ್ನು ಸ್ವತಃ ಅಮಿತಾಬ್ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.
ಅಮಿತಾಬ್ "ಪುಣೆ ಚಿತ್ರೋತ್ಸವದಲ್ಲಿ ಸಿನಿಮಾಗೆ ನನ್ನ ಕೊಡುಗೆಗೆ ಸಂಬಂಧಿಸಿ ಗೌರವ ನೀಡಲು ನಿರ್ಧರಿಸಲಾಗಿದೆ. ಆದರೆ ಸತ್ಯವೇನೆಂದರೆ, ನಾನು ಸಿನಿಮಾಗೆ ಯಾವ ಕೊಡುಗೆಯನ್ನೂ ನೀಡಿಲ್ಲ" ಎಂದಿದ್ದಾರೆ. 69 ವರ್ಷದ ಅಮಿತಾಬ್, ನಾಸಿಕ್ ನಲ್ಲಿರುವ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.
ಶಾಲೆಗೆ ಭೇಟಿ ನೀಡಿ ಮರಳಿದ ನಂತರ ಮಾತನಾಡಿದ ಅಮಿತಾಬ್, ಭೇಟಿ ಕೊಟ್ಟು ಫೋಟೋ ತೆಗೆಸಿಕೊಂಡ ತಕ್ಷಣ ಬದಲಾವಣೆ ತನ್ನಿಂದತಾನೇ ಆಗುವುದಿಲ್ಲ. ಬದಲಾವಣೆಯನ್ನು ತರುವ ಮತ್ತು ಒಪ್ಪಿಕೊಳ್ಳುವ ನಿರಂತರ ಮನಸ್ಥಿತಿ ಇರಬೇಕು ಎಂದಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಗೆ ಈಗಾಗಲೇ ಇರುವ ಸಾಕಷ್ಟು ಗೌರವದ ಜೊತೆಗೆ ಇನ್ನೊಂದು ಗೌರವ ಸೇರಿಕೊಳ್ಳಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











