ಐಶ್ವರ್ಯಾ ರೈ ಹೆರಿಗೆ: ಉಲ್ಟಾ ಹೊಡೆದ ಅಮಿತಾಬ್

ಅಮಿತಾಬ್ ಮಾಧ್ಯಮದಲ್ಲಿ ಬಂದ ವರದಿಯ ಬಗ್ಗೆ ಕಿಡಿಕಿಡಿಯಾಗಿದ್ದಾರೆ. ಟಿವಿ ಮೀಡಿಯಾಗಳು ತನ್ನ ಮೊಮ್ಮಗುವಿನ ಜನನದ ವೇಳೆ ಆಸ್ಪತ್ರೆಯ ಹೊರಗೆ ಇರಬಾರದೆಂದು ನಾನು ಹೇಳಿಯೇ ಇಲ್ಲ ಎಂದಿದ್ದಾರೆ. ಐಶೂ ಹೆರಿಗೆಯ ವೇಳೆ ಟಿವಿ ವರದಿಗಾರರು ಮತ್ತು ಕ್ಯಾಮೆರಾಗಳಿಗೆ ಜಾಗವಿಲ್ಲ ಎಂದು ಅಮಿತಾಬ್ ಹೇಳಿದ್ದರೆ? ಎಂಬುದೀಗ ಪ್ರಶ್ನೆಯಾಗಿಯೇ ಉಳಿದಿದೆ.

ಐಶೂ ಹೆರಿಗೆಯ ಸಮಯದಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಅವರು ಹೋಗಿ ಟಿವಿ ಮೀಡಿಯಾಗಳ ವರದಿಗಾರರು ಮತ್ತು ಕ್ಯಾಮೆರಾಗಳನ್ನು ಬ್ಯಾನ್ ಮಾಡಬೇಕೆಂದು ಹೇಳಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯೆ ನೀಡಿರುವ ಅಮಿತಾಬ್ "ಮಾಹಿತಿ ಮತ್ತು ಪ್ರಸಾರ ಇಲಾಖೆ ನನ್ನ ಮಾತನ್ನು ಕೇಳುತ್ತದೆಯೇ?" ಎಂದಿದ್ದಾರೆ.

ಐಶ್ವರ್ಯ ರೈ ಬಚ್ಚನ್ ಹೆರಿಗೆ ಕ್ಷಣ ಸಮೀಪಿಸುತ್ತಿದ್ದು, ಇಡೀ ಜಗತ್ತೇ ಕಾತರದಿಂದ ಅಮಿತಾಬ್ ಕುಟುಂಬದ ಕುಡಿಯ ಆಗಮನಕ್ಕಾಗಿ ಕಾದು ಕುಳಿತಿದೆ. ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆ ಈ ಐತಿಹಾಸಿಕ ಕ್ಷಣದ ಸಾಕ್ಷಿಗಾಗಿ ಸಕಲ ರೀತಿಯಲ್ಲೂ ಸಿದ್ಧವಾಗಿದೆ. ಐಶೂ ಮಗು, ಗಂಡೋ ಹೆಣ್ಣೋ ಎಂಬುದೀಗ ಬೆಟ್ಟಿಂಗ್ ವಿಷಯವಾಗಿದೆ. (ಏಜೆನ್ಸೀಸ್)

More from Filmibeat

English summary
Bollywood Big B Amithab Bachchan denies the matter, he is controlling TV coverage of his grandchild’s birth. 
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X