ಚಿರಯೌವನೆ ರೇಖಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ

ಇಂಥ ರೇಖಾ, ಇಂದು ಒಂಟಿ ಜೀವನ ಸಾಗಿಸುತ್ತಿದ್ದಾರೆ. ಹಾಗಂತ ಬೇಸರ ಆಕೆಗಿಲ್ಲವಂತೆ. ಯಾರಾದರೂ ನೀವು ಒಂಟಿ ಅನ್ನಿಸುವುದಿಲ್ಲವೇ ಎಂದು ಕೇಳಿದರೆ, ರೇಖಾ ಉತ್ತರವಾಗುವುದು ಹೀಗಂತೆ. "ನಿಮಗೆ ಗೊತ್ತಿರಲಿಕ್ಕಿಲ್ಲ, ಬೆಡ್ ರೂಂ ನಲ್ಲಿ ನಾನೊಂಡು ಸ್ಟಿಕರ್ ಅಂಟಿಸಿಕೊಂಡಿದ್ದೀನಿ. ಅದರಲ್ಲಿ 'ನೀವು ಗರ್ಭಿಣಿಯಾಗಿದ್ದರೆ ಒಂಟಿಯಲ್ಲ' ಎಂದು ಬರೆದಿದೆ.
ನನ್ನ ಕನಸುಗಳು, ಯೋಚನೆಗಳು ಸದಾ ನನ್ನೊಂದಿಗಿರುತ್ತವೆ. ನಾನು ನನ್ನ ಬಾಲ್ಯಕ್ಕೆ, ಪ್ರೀತಿಪಾತ್ರರೊಡನೆ ಕಳೆದ ಮಧುರಕ್ಷಣಕ್ಕೆ ಆಗಾಗ ತಿರುಗಿ ಹೋಗಬಲ್ಲೆ. ಹಾಗಿರುವಾಗ ನಾನು ಹೇಗೆ ಒಂಟಿಯಾಗಿರಲು ಸಾಧ್ಯ?" ರೇಖಾ ಈ ಮರುಪ್ರಶ್ನೆಗೆ ತಬ್ಬಿಬ್ಬಾಗುವವರೇ ಹೆಚ್ಚಂತೆ. ಹೌದಲ್ಲವೇ, ರೇಖಾ ಈಸ್ ಗ್ರೇಟ್!
ರೇಖಾ ಮುಖೇಶ್ ಅಗರವಾಲ್ ಎಂಬ ಉದ್ಯಮಿಯನ್ನು 1990 ರಲ್ಲಿ ಮದುವೆಯಾಗಿದ್ದರು. ಮುಖೇಶ್ ನಂತರ ಒಂದೇ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅದಕ್ಕೆ ಕಾರಣ ರೇಖಾ ಕೂಡ ಹೇಳದೇ ಅದು ಇಂದೂ ಕೂಡ ರಹಸ್ಯವೇ ಆಗಿದೆ. ಮತ್ತೆ ರೇಖಾ ಮದುವೆಯಾಗಲಿಲ್ಲ. ಅಮಿತಾಭ್ ನೊಂದಿಗಿನ ಮಧುರ ಪ್ರೇಮದ ಗುಂಗು ಇನ್ನೂ ಆಕೆಯನ್ನು ಕಾಡುತ್ತಿದೆಯಾ? ಉತ್ತರ ರೇಖಾ ಮಾತ್ರ ಹೇಳಬಲ್ಲರು!
ಇರಲಿ, ರೇಖಾ ಹಳೆಯ ಕಥೆಯಿಂದಾಗಲೀ, ವಯಸ್ಸಿನಿಂದಾಗಲೀ ನಮಗೇನಾಗಬೇಕು. ಆದರೆ ಈ 57ರ ಹರೆಯದಲ್ಲೂ ತಾರುಣ್ಯ ಉಳಿಸಿಕೊಂಡಿರುವ ರಹಸ್ಯಕ್ಕೆ ಉತ್ತರ ಬೇಕು ಅಲ್ಲವೇ? ಕಾಲದ ಜೊತೆ ಯುದ್ಧ ಗೆದ್ದಿರುವ ರೇಖಾ ಬಾಯ್ಬಿಟ್ಟಾಗ ತಿಳಿದುಕೊಂಡರಾಯ್ತು. ಈ ರೇಖಾ ಕನ್ನಡ (ಸಿಐಡಿ 999) ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದು ಎಂಬುದು ಗಮನದಲ್ಲಿರಲಿ.ಈಗ ಹೇಳೋಣ... ಹ್ಯಾಪಿ ಬರ್ಥ್ ಡೇ ರೇಖಾ..!


Click it and Unblock the Notifications











