For Quick Alerts
  ALLOW NOTIFICATIONS  
  For Daily Alerts

  ಸಿನಿ ಇಂಡಸ್ಟ್ರಿಯಲ್ಲಿ ಯಾರೆಲ್ಲಾ ಫೇಸ್‌ಬುಕ್-ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು?

  |

  ಕಳೆದ ಎರಡ್ಮೂರು ದಿನಗಳಿಂದ ಕೋಲುಮಂಡೆ ಹಾಡಿಗೆ ಸಂಬಂಧಿಸಿದಂತೆ ವಿವಾದಕ್ಕೆ ಸಿಲುಕಿಕೊಂಡಿದ್ದ ಗಾಯಕ ಚಂದನ್ ಶೆಟ್ಟಿ ಅವರ ಫೇಸ್‌ಬುಕ್ ಖಾತೆ ಬುಧವಾರ ರಾತ್ರಿ (ಆಗಸ್ಟ್ 26) ಹ್ಯಾಕ್ ಆಗಿದೆ. ಯಾರೋ ವಿದೇಶಿಗರು ಚಂದನ್ ಅವರ ಫೇಸ್‌ಬುಕ್ ಖಾತೆ ಲೈವ್ ವಿಡಿಯೋ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಹೀಗೆ, ಸೆಲೆಬ್ರಿಟಿಗಳ ಫೇಸ್‌ಬುಕ್ ಹಾಗು ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಹಲವು ದೊಡ್ಡ ಸ್ಟಾರ್ ಕಲಾವಿದರ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಖಾತೆಗಳು ಹ್ಯಾಕ್ ಆಗಿವೆ. ಹಾಗಾದ್ರೆ, ಇದುವರೆಗೂ ಯಾರೆಲ್ಲಾ ಅಕೌಂಟ್‌ಗಳು ಹ್ಯಾಕ್ ಆಗಿತ್ತು ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ. ಮುಂದೆ ಓದಿ...

  ಅಮಿತಾಭ್ ಬಚ್ಚನ್ ಖಾತೆ ಹ್ಯಾಕ್

  ಅಮಿತಾಭ್ ಬಚ್ಚನ್ ಖಾತೆ ಹ್ಯಾಕ್

  ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಟ್ವಿಟ್ಟರ್ ಖಾತೆಯನ್ನು ಟರ್ಕಿಶ್ ವ್ಯಕ್ತಿ ಹ್ಯಾಕ್ ಮಾಡಿದ್ದ. 2019ರ ಜನವರಿ ತಿಂಗಳಲ್ಲಿ ಬಿಗ್ ಬಿ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಪ್ರೋಫೈಲ್ ಫೋಟೋ ಸಹ ಬದಲಿಸಲಾಗಿತ್ತು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಅಪ್‌ಲೌಡ್ ಮಾಡಿದ್ದರು.

  ಚಂದನ್ ಶೆಟ್ಟಿ ಫೇಸ್‌ಬುಕ್ ಖಾತೆ ಹ್ಯಾಕ್‌ಚಂದನ್ ಶೆಟ್ಟಿ ಫೇಸ್‌ಬುಕ್ ಖಾತೆ ಹ್ಯಾಕ್‌

  ಶ್ರುತಿ ಹಾಸನ್ ಫೇಸ್‌ಬುಕ್ ಹ್ಯಾಕ್

  ಶ್ರುತಿ ಹಾಸನ್ ಫೇಸ್‌ಬುಕ್ ಹ್ಯಾಕ್

  ಸುಮಾರು ನಾಲ್ಕು ವರ್ಷದ ಹಿಂದೆ ಬಹುಭಾಷಾ ನಟಿ ಶ್ರುತಿ ಹಾಸನ್ ಅವರ ಫೇಸ್‌ಬುಕ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದರು. ಫೇಸ್‌ಬುಕ್, ಟ್ವಿಟ್ಟರ್ ಹಾಗೂ ಜೀ-ಮೇಲ್ ಸಹ ಹ್ಯಾಕ್ ಮಾಡಿದ್ದರು. ಬಳಿಕ ಕೃತಿ ಸನನ್ ಫೋಟೋಗಳನ್ನು ಪೋಸ್ಟ್ ಮಾಡಿದ್ದರು.

  ಶಾಹೀದ್ ಕಪೂರ್ ಖಾತೆ ಹ್ಯಾಕ್

  ಶಾಹೀದ್ ಕಪೂರ್ ಖಾತೆ ಹ್ಯಾಕ್

  2018ರಲ್ಲಿ ನಟ ಶಾಹೀದ್ ಕಪೂರ್ ಅವರ ಇನ್ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. 'ಪದ್ಮಾವತ್' ಸಿನಿಮಾದ ಬಿಡುಗಡೆ ಬಳಿಕ ಹ್ಯಾಕ್ ಆಗಿತ್ತು. ಟರ್ಕಿಶ್ ವ್ಯಕ್ತಿ ಶಾಹೀದ್ ಅವರ ಖಾತೆ ಹ್ಯಾಕ್ ಮಾಡಿದ್ದರು ಎನ್ನುವುದು ಬಹಿರಂಗವಾಗಿತ್ತು.

  ರಕುಲ್ ಪ್ರೀತ್ ಸಿಂಗ್

  ರಕುಲ್ ಪ್ರೀತ್ ಸಿಂಗ್

  ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಸ್ಟಾರ್ ಆಗಿದ್ದ ರಕುಲ್ ಪ್ರೀತ್ ಸಿಂಗ್ ಅವರ ಇನ್ಸ್ಟಾಗ್ರಾಂ ಖಾತೆಯನ್ನು 2018ರಲ್ಲಿ ಯಾರೋ ಹ್ಯಾಕ್ ಮಾಡಿದ್ದರು. ಹ್ಯಾಕ್ ಆದ ಬಳಿಕ ಅಭಿಮಾನಿಗಳಿಗೆ ಈ ವಿಷಯ ತಿಳಿಸಿದ್ದರು.

  ಹೃತಿಕ್ ರೋಷನ್ ಖಾತೆ ಹ್ಯಾಕ್

  ಹೃತಿಕ್ ರೋಷನ್ ಖಾತೆ ಹ್ಯಾಕ್

  ಬಾಲಿವುಡ್ ಮತ್ತೊಬ್ಬ ನಟ ಹೃತಿಕ್ ರೋಷನ್ ಅವರ ಫೇಸ್‌ಬುಕ್ ಖಾತೆ 20116ರಲ್ಲಿ ಹ್ಯಾಕ್ ಆಗಿತ್ತು. ಫೋಟೋ ಸಹ ಬದಲಾಯಿಸಿದ್ದರು. ಬಳಿಕ, ತಮ್ಮ ಖಾತೆಯನ್ನು ನಿಯಂತ್ರಿಸುವಲ್ಲಿ ಹೃತಿಕ್ ಯಶಸ್ವಿಯಾಗಿದ್ದರು.

  ಆಮಿ ಜಾಕ್ಸನ್ ಫೋನ್ ಹ್ಯಾಕ್

  ಆಮಿ ಜಾಕ್ಸನ್ ಫೋನ್ ಹ್ಯಾಕ್

  'ದಿ ವಿಲನ್' ಸಿನಿಮಾದಲ್ಲಿ ನಟಿಸಿದ್ದ ಆಮಿ ಜಾಕ್ಸನ್ ಅವರ ಫೋನ್ ಹ್ಯಾಕ್ ಆಗಿತ್ತು. ಫೋನ್‌ನಲ್ಲಿದ್ದ ಖಾಸಗಿ ಫೋಟೋಗಳು ಹಾಗೂ ಮಾಹಿತಿಯನ್ನು ಹ್ಯಾಕ್ ಮಾಡಲಾಗಿತ್ತು. ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಮಾಡಿದ್ದರು. ಸೈಬರ್ ಪೊಲೀಸರಿಗೆ ದೂರು ಸಹ ನೀಡಿದ್ದರು ನಟಿ ಆಮಿ ಜಾಕ್ಸನ್.

  ಹನ್ಸಿಕಾ ಮೊಟ್ವಾನಿ ಖಾತೆ ಹ್ಯಾಕ್

  ಹನ್ಸಿಕಾ ಮೊಟ್ವಾನಿ ಖಾತೆ ಹ್ಯಾಕ್

  ನಟಿ ಹನ್ಸಿಕಾ ಮೊಟ್ವಾನಿ ಅವರ ಟ್ವಿಟ್ಟರ್ ಖಾತೆ ಐದಕ್ಕಿಂತ ಹೆಚ್ಚು ಸಲ ಹ್ಯಾಕ್ ಆಗಿದೆ. ಈ ಕುರಿತು ಸೈಬರ್ ಪೊಲೀಸರಿಗೆ ದೂರು ಸಹ ನೀಡಿದ್ದರು.

  ತ್ರಿಷಾ ಕೃಷ್ಣನ್ ಖಾತೆ ಹ್ಯಾಕ್

  ತ್ರಿಷಾ ಕೃಷ್ಣನ್ ಖಾತೆ ಹ್ಯಾಕ್

  ಬಹುಭಾಷಾ ನಟಿ ತ್ರಿಷಾ ಕೃಷ್ಣ್ ಅವರ ಸೋಶಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗಿದ್ದವು. ಈ ಕುರಿತು ಪೊಲೀಸರ ಮೊರೆ ಸಹ ಹೋಗಿದ್ದರು.

  ಪೂನಂ ಪಾಂಡೆ ಖಾತೆ ಹ್ಯಾಕ್

  ಪೂನಂ ಪಾಂಡೆ ಖಾತೆ ಹ್ಯಾಕ್

  ಹಾಟ್ ನಟಿ ಪೂನಂ ಪಾಂಡೆ ಅವರ ವೆಬ್‌ಸೈಟ್ ಹ್ಯಾಕ್ ಆಗಿತ್ತು. ಪಾಕಿಸ್ತಾನ ಮೂಲದವರು ನನ್ನ ಖಾತೆ ಹ್ಯಾಕ್ ಮಾಡಿದ್ದಾರೆ ಎಂದು ಪೂನಂ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.

  ಕರಣ್ ಜೋಹರ್ ಖಾತೆ ಹ್ಯಾಕ್

  ಕರಣ್ ಜೋಹರ್ ಖಾತೆ ಹ್ಯಾಕ್

  ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಗೆ ಸಂಬಂಧಿಸಿದಂತೆ ಎಲ್ಲ ಸೋಶಿಯಲ್ ಮಿಡಿಯಾ ಖಾತೆಗಳನ್ನು ಅನಾಮಿಕರು ಹ್ಯಾಕ್ ಮಾಡಿದ್ದರು. ಉದ್ದೇಶಪೂರ್ವಕವಾಗಿ ಕರಣ್ ವಿರುದ್ಧ ಅಪಪ್ರಚಾರ ಮಾಡಲು ಸಂಚು ರೂಪಿಸಿದ್ದರು.

  English summary
  Here is the list of 10 bollywood celebrities whose social media accounts have been hacked. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X