ಪ್ರಿಯಾಂಕಾ ಜೊತೆ ಸೈಫ್ ಹಂಚಿಕೊಳ್ಳಲು ಕರೀನಾ ರೆಡಿ!

ಇಷ್ಟೇ ಆಗಿದ್ದರೂ ಪರವಾಗಿಲ್ಲ. ಇದು ಇನ್ನೂ ಒಂದೆರಡು ಹೆಜ್ಜೆ ಮುಂದಕ್ಕೇ ಹೋಗಿದೆ. ಸೈಫ್ ಅಲಿಕಾನ್ ಮತ್ತು ಪ್ರಿಯಾಂಕ ಜೋಡಿ ಸ್ಕ್ರೀನಿನಲ್ಲಿ ಸೂಪರ್! ಅಂದಿದ್ದಾಳೆ ಕರೀನಾ. ಬಾಲಿವುಡ್ ಬೇಬೋ ಬಾಯಿಂದ ಇಂಥ ಮಾತೇ? ಹೇಳಿಕೇಳಿ ಸೈಫ್ ಕರೀನಾಳ ಪ್ರಿಯಕರ, ಒಬ್ಬರಿಗೊಬ್ಬರು ಅಂಟಿಕೊಂಡಿರುವುದೇ ಜಾಸ್ತಿ. ಮೇಲಾಗಿ ಪ್ರಿಯಾಂಕಾ-ಕರೀನಾ ಸಂಬಂಧ ಎಣ್ಣೆ-ಸೀಗೆಕಾಯಿ!
ಅವಳ ಬಾಯಿಂದ ಬಂದ ಈ ಮಾತಿಗೆ ಬಾಲಿವುಡ್ ಕಕ್ಕಾಬಿಕ್ಕಿ! ಆದಷ್ಟು ಶೀಘ್ರದಲ್ಲಿ ಇವರಿಬ್ಬರೂ ನಟಿಸಿರುವ ಚಿತ್ರವೊಂದು ಬಿಡುಗಡೆ ಆಗಲಿ ಎಂದು ಬಾಲಿವುಡ್ ಅಂಗಳ ಕಾಯುತ್ತಿದೆ. ಇವರಿಬ್ಬರ ಮಧ್ಯೆ ಸೈಫ್ ಕೂಡ ಇರಲಿ ಎಂದು ಯಾರಾದರೂ ಬಯಸುವುದು ಸಹಜ ತಾನೇ?
ರಾಜಕೀಯ ಹಾಗೂ ಸಿನಿಮಾರಂಗಗಳಲ್ಲಿ ಯಾವ ಶತ್ರುತ್ವವೂ ಶಾಶ್ವತವಲ್ಲ ಅಂತ ಹೇಳೋದು ಸುಮ್ನೇನಾ? ಮಿತ್ರತ್ವದ ಬಗ್ಗೆ ಕೇಳ್ಬೇಡಿ. ಅಲ್ಲಿ ಯಾವುದೂ ಶಾಶ್ವತ ಅಲ್ಲ ಅಂತ ನಗ್ಬೇಡಿ ಅಷ್ಟೇ!
More from Filmibeat
English summary
Bollywood actress Priyanka Chopra wants to work with Kareena Kapoor. Also, Bebo said Piggy chops and Saif would make a sizzling on-screen pair


Click it and Unblock the Notifications











