ಕೈಟ್ಸ್ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ
ಹೃತಿಕ್ ರೋಶನ್ ಹಾಗೂ ಬಾರ್ಬರಾ ಮೋರಿ ಮುಖ್ಯಭೂಮಿಕೆಯಲ್ಲಿರುವ ಬಾಲಿವುಡ್ ನ ಬಹುನಿರೀಕ್ಷಿತ ಅದ್ದೂರಿ ಚಿತ್ರ 'ಕೈಟ್ಸ್'ಗೆ ಕಾಪಿರೈಟ್ ಸಮಸ್ಯೆ ಎದುರಾಗಿದೆ. ಈ ಚಿತ್ರವನ್ನು ಹೃತಿಕ್ ರೋಶನ್ ತಂದೆ ರಾಕೇಶ್ ರೋಶನ್ ನಿರ್ಮಿಸಿದ್ದಾರೆ. ಈ ಚಿತ್ರ ಮುಂದಿನ ವಾರ ಬಿಡುಗಡೆಯಾಗುವ ಸಾಧ್ಯತೆಯಿತ್ತು.
ಚಿತ್ರದ ಬಿಡುಗಡೆಗೆ ಬಿಹಾರದ ಸಿಟಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಚಿತ್ರದ ನಾಯಕ ನಟ ರೋಶನ್ ಹಾಗೂ ಹ್ಯಾಪಿ ಅವರ್ಸ್ ಎಂಟರ್ ಟೈನ್ ಮೆಂಟ್ ನ ಅಧಿಕಾರಿಗಳು ಮೇ.24ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಸನ್ ಬೀಮ್ ಹೋಲ್ಡಿಂಗ್ಸ್ ನ ಲಕ್ಶ್ಮಿ ಪ್ರಸಾದ್ ಎಂಬುವವರು ಕೇಸು ದಾಖಲಿಸಿದ್ದರು. ಸುಮಾರು ರು.10 ಕೋಟಿಗೆ ಚಿತ್ರದ ಸಾಹಸ ಸನ್ನಿವೇಶಗಳನ್ನು ಕಾಪಿರೈಟ್ ನಡಿ ಮಾರಾಟ ಮಾಡಿದ್ದ ಅವರಿಗೆ ಇದುವರೆಗೂ ಹಣ ಸಂದಾಯವಾಗಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅರ್ಧದಷ್ಟು ಹಣವನ್ನು ಪಾವತಿ ಮಾಡುವುದಾಗಿ ರಾಕೇಶ್ ರೋಶನ್ ಒಪ್ಪಿಕೊಂಡಿದ್ದರು. ಆದರೆ ಕಡೆಗೂ ಹಣ ಸಂದಾಯವಾಗಿಲ್ಲ ಎಂದು ಅವರು ಆಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಪ್ರಸಾದ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಾಗಾಗಿ ಚಿತ್ರದ ಬಿಡುಗಡೆಯನ್ನು ನ್ಯಾಯಾಲಯ ತಡೆಹಿಡಿದಿದೆ. ಪರಿಸ್ಥಿತಿ ಹೀಗಿದ್ದರೂ ಕೈಟ್ಸ್ ಚಿತ್ರ ಮೇ.21ರಂದು ಬಿಡುಗಡೆಯಾಗಲಿದೆ ಎಂದು ಹೃತಿಕ್ ರೋಶನ್ ಹಾಗೂ ಬಾರ್ಬರಾ ಮೋರಿ ತಿಳಿಸಿದ್ದಾರೆ.


Click it and Unblock the Notifications











