ದೀಪಿಕಾಗೆ ಒಬ್ಬ ಬಾಯ್ ಫ್ರೆಂಡ್ ಬೇಕಿದೆ
ದೀಪಿಕಾ ಪಡುಕೋಣೆ, ಬಾಲಿವುಡ್ ನ ಚತುರ ನಟಿ. ನಟನೆಗಿಂತ ಗೆಳೆಯರನ್ನು ಆರಿಸಿ, ಪಳಗಿಸಿ, ಮಾಧ್ಯಮದವರಿಗೆ ಚಳ್ಳೆ ಹಣ್ಣು ತಿನ್ನಿಸುವ ಚತುರತೆ ಮತ್ತೊಬ್ಬರಿಗೆ ತಿಳಿದಿಲ್ಲ ಎನ್ನಬಹುದು. ಎಲ್ಲರೊಡನೆಯೂ ಸ್ನೇಹಪರವಾಗಿರುವ ಈ ಬೆಂಗಳೂರು ಬೆಡಗಿ ಜೊತೆ ರಣಬೀರ್ ನಂತರ ಸಿದ್ದಾರ್ಥ್ ಮಲ್ಯ ಹೆಸರು ಸೇರಿಕೊಂಡು ಬೆಂಗಳೂರು, ಮಂಗಳೂರು, ಲಂಡನ್ ಎಂದು ಓಡಾಡಿದರೂ ಇವನು ಗೆಳಯನಲ್ಲ, ಗೆಳತಿ ನಾನು ಮೊದಲೇ ಅಲ್ಲ ಎಂದು ದೀಪಿಕಾ ಗುನುಗುತ್ತಿದ್ದಾಳೆ.
ಒಟ್ಟಿನಲ್ಲಿ ದೀಪಿಕಾಗೆ ಒಬ್ಬ ಬಾಯ್ ಫ್ರೆಂಡ್ ಬೇಕಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷ್ಯವನ್ನು ದೀಪಿಕಾ ಹೇಳಿಕೊಂಡಿದ್ದಾರೆ. ನನ್ನ ಕನಸಿನ ರಾಜ ಇನ್ನೂ ಸಿಕ್ಕಿಲ್ಲ.ಮಲ್ಯ ಜೂ. ಗೆಳಯನೇ ಹೊರತೂ ಪ್ರೇಮಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ದೀಪಿಕಾಳಿಗಾಗಿ ಹೊಸ ಫಿಲ್ಮಂ ಪ್ರೊಡಕ್ಷನ್ ಯೂನಿಟ್ ಆರಂಭಿಸಲು ಚಿಂತಿಸಿದ್ದ ಸಿದ್ದಾರ್ಥ್ ಮಲ್ಯಗೆ ದೀಪಿಕಾಳ ಈ ನಾನ್ ಕಮಿಟೆಡ್ ಅನ್ನೋ ಡೈಲಾಗ್ ಕಿವಿಯಲ್ಲಿ ಕಬ್ಬಿಣ ಕಾಸಿ ಸುರಿದಂತಾಗಿದೆ. ಆದರೂ, ಆತ ಕೂಡ ಫಾರಿನ್ ಸ್ಟೈಲ್ ಇಂಗ್ಲೀಷ್ ನಲ್ಲಿ ದೀಪಿಕಾ ಪರವಾಗೇ ಯಾವಾಗಲೂ ಮಾತನಾಡಿದ್ದಾನೆ. ಎಷ್ಟೇ ಬೇಜಾರಾದರೂ ಲೋಕಲ್ ಕುಡಿದು ಟೈಟ್ ಆಗೋ ಪೈಕಿಯಲ್ಲ ಸಿದ್ದಾರ್ಥ. ಪಕ್ಕ ಪ್ರೋಫೆಷನಲ್. ದೀಪಿಕಾ ಮನಸ್ಸು ಯಾವಾಗ ಬದಲಾಗುತ್ತೋ ನೋಡೋಣ. "ಕಮಿಟ್ ಆಗಿಲ್ಲ ಆದ್ರೆ I' m not single ಎನ್ನುವ ದೀಪಿಕಾ ಮನಸ್ಸು ಸದಾ ಚಂಚಲಾ ಎನ್ನುವ ಸಾರ್ವಜನಿಕ ಗುಟ್ಟು ಜೂ. ಮಲ್ಯನಿಗೂ ಗೊತ್ತು.
ಇತ್ತ, ಸಿನಿಮಾ ಬಗ್ಗೆ ಗಮನ ಹರಿಸಿರುವ ದೀಪಿಕಾ, ದೇಸಿ ಬಾಯ್ಜ್, ರೇಸ್ 2, ಹೀರ್ ಅಂಡ್ ರಾಂಜಾ, ಹೌಸ್ ಫೌಲ್ 2, ಏಜೆಂಟ್ ವಿನೋದ್ ಅಲ್ಲದೆ ಧೂಮ್ ಸರಣಿ ಹೊಚ್ಚ ಹೊಸ ಸಿನಿಮಾದಲ್ಲೂ ನಟಿಸುತ್ತಿದಾಳೆ. ಕಾಲ್ ಶೀಟ್ ಸಮಸ್ಯೆಯಿಂದ ರಜನಿಕಾಂತ್ ಕಡೆ ನಿರ್ಮಾಪಕರನ್ನು ಕ್ಯೂ ನಲ್ಲಿ ನಿಲ್ಲಿಸಿದ್ದಾಳೆ.


Click it and Unblock the Notifications











