'ಸಂಜು': ನಿರ್ದೇಶಕರು ಮುಟ್ಟದ ಸಂಜಯ್ ದತ್ ಬದುಕಿನ 10 ಅಧ್ಯಾಯಗಳು

By Harshitha

ಬಾಲಿವುಡ್ ನಟ ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಚಿತ್ರವೇ 'ಸಂಜು'. ಈ ಸಿನಿಮಾದಲ್ಲಿ ಸಂಜಯ್ ದತ್ ಡ್ರಗ್ ಅಡಿಕ್ಟ್ ಆಗಿದ್ದು ಹೇಗೆ.? ಮಾದಕ ದ್ರವ್ಯಗಳಿಂದ ಸಂಜಯ್ ದತ್ ಮುಕ್ತಿ ಪಡೆದಿದ್ದು ಹೇಗೆ.? ಎಂಬುದರ ಬಗ್ಗೆ ವಿವರಣೆ ಇದೆ.

ಜೊತೆಗೆ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಹೆಸರು ತಳುಕು ಹಾಕಿಕೊಂಡಿದ್ದು ಯಾಕೆ.? ಎಂಬುದರ ಬಗ್ಗೆಯೂ ನಿರ್ದೇಶಕ ರಾಜಕುಮಾರ್ ಹಿರಾನಿ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ.

ಆದ್ರೆ, ಸಂಜಯ್ ಬದುಕಿನ ಕೆಲ ಅಧ್ಯಾಯಗಳನ್ನ ನಿರ್ದೇಶಕ ರಾಜಕುಮಾರ್ ಹಿರಾನಿ ಟಚ್ ಕೂಡ ಮಾಡಲು ಹೋಗಿಲ್ಲ. ಡೈರೆಕ್ಟರ್ ಸಾಹೇಬ್ರು ಮುಟ್ಟದ ಸಂಜಯ್ ದತ್ ಜೀವನದ ಕೆಲ ಅಂಶಗಳು ಇಲ್ಲಿವೆ, ನೋಡಿರಿ...

ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾ

ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾ

'ಸಂಜು' ಸಿನಿಮಾದಲ್ಲಿ ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾ ಬಗ್ಗೆ ಉಲ್ಲೇಖ ಇಲ್ಲ. 1987 ರಲ್ಲಿ ಸಂಜಯ್ ದತ್-ರಿಚಾ ಶರ್ಮಾ ವಿವಾಹ ನಡೆದಿತ್ತು. ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದ ರಿಚಾ ಶರ್ಮಾ 1996 ರಲ್ಲಿ ಸಾವನ್ನಪ್ಪಿದರು. ಈ ದಂಪತಿಗೆ ತ್ರಿಶಾಲಾ ದತ್ ಎಂಬ ಪುತ್ರಿ ಇದ್ದಾರೆ. ಈಕೆಯೂ 'ಸಂಜು' ಸಿನಿಮಾದಲ್ಲಿ ಮಿಸ್ ಆಗಿದ್ದಾರೆ.

ಸಂಜಯ್ ದತ್ ಎರಡನೇ ಪತ್ನಿ ರಿಯಾ ಪಿಳ್ಳೈ

ಸಂಜಯ್ ದತ್ ಎರಡನೇ ಪತ್ನಿ ರಿಯಾ ಪಿಳ್ಳೈ

ರಿಚಾ ಶರ್ಮಾ ಕೊನೆಯುಸಿರೆಳೆದ ಬಳಿಕ ರಿಯಾ ಪಿಳ್ಳೈ ರನ್ನ ಸಂಜಯ್ ದತ್ ವರಿಸಿದರು. ಆದ್ರೆ, ಈ ಮದುವೆಯೂ ಹೆಚ್ಚು ದಿನ ಬಾಳಲಿಲ್ಲ. ಸಂಜಯ್ ಎರಡನೇ ಪತ್ನಿ ರಿಯಾ ಪಿಳ್ಳೈ ಬಗ್ಗೆಯೂ 'ಸಂಜು' ಸಿನಿಮಾದಲ್ಲಿ ತೋರಿಸಿಲ್ಲ.

ಮಾಧುರಿ ಜೊತೆಗಿನ ಲಿಂಕಪ್

ಮಾಧುರಿ ಜೊತೆಗಿನ ಲಿಂಕಪ್

ಸಂಜಯ್ ದತ್ ಹಾಗೂ ಮಾಧುರಿ ದೀಕ್ಷಿತ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿತ್ತು ಎಂಬ ಗಾಸಿಪ್ ಹಳೆಯದ್ದೇ. ಆದ್ರೆ, ಇದರ ಸತ್ಯಾಸತ್ಯತೆಯನ್ನ 'ಸಂಜು' ಸಿನಿಮಾದಲ್ಲಿ ಬಯಲು ಮಾಡಿಲ್ಲ.

ಬಾಳ್ ಠಾಕ್ರೆ ಪಾತ್ರ

ಬಾಳ್ ಠಾಕ್ರೆ ಪಾತ್ರ

ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಜಯ್ ದತ್ ಅರೆಸ್ಟ್ ಆಗಿದ್ದಾಗ, ಅವರನ್ನ ಬಿಡಿಸಲು ತಂದೆ ಸುನೀಲ್ ದತ್ ಬಾಳ್ ಠಾಕ್ರೆ ರನ್ನ ಭೇಟಿ ಮಾಡಿದ್ದರು ಎಂದು ವರದಿ ಆಗಿತ್ತು. 18 ತಿಂಗಳ ಜೈಲು ವಾಸದ ನಂತರ ಸಂಜಯ್ ದತ್ ಹೊರಬಂದರು. ಸಂಜಯ್ ದತ್ ಗೆ ಜಾಮೀನು ಸಿಗುವಲ್ಲಿ ಬಾಳ್ ಠಾಕ್ರೆ ನಿರ್ವಹಿಸಿದ ಪಾತ್ರದ ಬಗ್ಗೆಯೂ 'ಸಂಜು' ಸಿನಿಮಾದಲ್ಲಿ ಸುಳಿವು ನೀಡಿಲ್ಲ.

ಕುಮಾರ್ ಗೌರವ್ ಜೊತೆಗಿನ ಸ್ನೇಹ

ಕುಮಾರ್ ಗೌರವ್ ಜೊತೆಗಿನ ಸ್ನೇಹ

ಕುಮಾರ್ ಗೌರವ್ ಎಂಬುವರು ಸಂಜಯ್ ದತ್ ರವರ ಕ್ಲೋಸ್ ಫ್ರೆಂಡ್. ಆದ್ರೆ, 'ಸಂಜು' ಸಿನಿಮಾದಲ್ಲಿ ಕುಮಾರ್ ಗೌರವ್ ಅಧ್ಯಾಯವನ್ನ ರಾಜಕುಮಾರ್ ಹಿರಾನಿ ಮುಟ್ಟಿಲ್ಲ.

ಸಲ್ಮಾನ್ ಜೊತೆಗಿನ ಗೆಳೆತನ

ಸಲ್ಮಾನ್ ಜೊತೆಗಿನ ಗೆಳೆತನ

ಹಾಗ್ನೋಡಿದ್ರೆ, ಒಂದ್ಕಾಲದಲ್ಲಿ ಸಂಜಯ್ ದತ್ ಹಾಗೂ ಸಲ್ಮಾನ್ ಖಾನ್ ಆತ್ಮೀಯ ಸ್ನೇಹಿತರು. ಆದ್ರೆ, ಅದ್ಯಾಕೋ ಏನೋ 'ಸಂಜು' ಚಿತ್ರದಲ್ಲೆಲ್ಲೂ ಸಲ್ಮಾನ್ ಕಾಣಿಸುವುದೇ ಇಲ್ಲ.

ಆತ್ಮೀಯ ಸ್ನೇಹಿತ ಸಂಜಯ್ ಗುಪ್ತ

ಆತ್ಮೀಯ ಸ್ನೇಹಿತ ಸಂಜಯ್ ಗುಪ್ತ

'ಸಂಜು' ಸಿನಿಮಾದಲ್ಲಿ ಸಂಜಯ್ ದತ್ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಒತ್ತು ಕೊಡಲಾಗಿದೆ. ಹೀಗಾಗಿ ಚಿತ್ರರಂಗದ ದೋಸ್ತ್ ಸಂಜಯ್ ಗುಪ್ತ ಬಗ್ಗೆ ಕೂಡ ರಾಜಕುಮಾರ್ ಹಿರಾನಿ ಟಚ್ ಮಾಡಿಲ್ಲ.

ಭೂಗತ ಲೋಕದ ನಂಟು ಬೆಳೆದಿದ್ದು ಹೇಗೆ.?

ಭೂಗತ ಲೋಕದ ನಂಟು ಬೆಳೆದಿದ್ದು ಹೇಗೆ.?

ಎಕೆ 56 ರೈಫಲ್ ಗಳನ್ನ ಸಂಜಯ್ ದತ್ ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಕಾರಣ ಏನು ಎಂಬುದರ ಬಗ್ಗೆ 'ಸಂಜು' ಚಿತ್ರದಲ್ಲಿ ವಿವರಣೆ ಕೊಡಲಾಗಿದೆ. ಆದ್ರೆ, ಅವರಿಗೂ ಭೂಗತ ಪಾತಕಿಗಳ ನಡುವೆ ನಂಟು ಇತ್ತೇ.? ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ರಾಜಕೀಯಕ್ಕೆ ಕಾಲಿಡಲು ತಯಾರಾದ ಸಂಜಯ್ ದತ್

ರಾಜಕೀಯಕ್ಕೆ ಕಾಲಿಡಲು ತಯಾರಾದ ಸಂಜಯ್ ದತ್

2009 ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಲು ಸಂಜಯ್ ದತ್ ಮುಂದಾಗಿದ್ದರು. ಆದ್ರೆ, ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರ ಹೆಸರು ಇದ್ದಿದ್ರಿಂದ, ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅನುಮತಿ ಕೊಡಲಿಲ್ಲ. ಇದನ್ನ ರಾಜಕುಮಾರ್ ಹಿರಾನಿ ಎಡಿಟ್ ಮಾಡಿದ್ದು ಯಾಕೆ.?

'ವಾಸ್ತವ್' ಎಲ್ಲಿ.?

'ವಾಸ್ತವ್' ಎಲ್ಲಿ.?

'ಸಂಜು' ಸಿನಿಮಾದಲ್ಲಿ 'ಮುನ್ನಾಭಾಯಿ ಎಂ.ಬಿ.ಬಿ.ಎಸ್' ಚಿತ್ರದ ಬಗ್ಗೆ ತೋರಿಸುತ್ತಾರೆ. ಆದ್ರೆ, ಅದಕ್ಕೂ ಮುನ್ನ 'ವಾಸ್ತವ್' ಚಿತ್ರ ಹಿಟ್ ಆಗಿತ್ತು. ಇದನ್ನ ಬೇಕಂತ್ಲೇ ಬಿಟ್ರಾ ಡೈರೆಕ್ಟರ್ ಸಾಹೇಬ್ರು.?

More from Filmibeat

English summary
Here are 10 Important events that occurred in Bollywood Actor Sanjay Dutt's life which are missing in Bollywood flick 'Sanju'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X