For Quick Alerts
ALLOW NOTIFICATIONS  
For Daily Alerts

ಜಾನ್-ವಿದ್ಯಾ ಬಾಲನ್ ರೋಮಾನ್ಸ್ ನಲ್ಲಿ ಫೋರ್ಸ್ 2!

|

ಜಾನ್ ಅಬ್ರಹಾಂ ಮತ್ತು ಜೆನಿಲಿಯಾ ಜೋಡಿಯ 'ಫೋರ್ಸ್' ಸಖತ್ ಹಿಟ್ ಚಿತ್ರ ಎನಿಸಿಕೊಂಡಿದೆ. ಈ ಹಿಟ್ ನಿಂದ ಹಿಗ್ಗಿ ಹೀರೇಕಾಯಿ ಆಗಿರುವ ಈ ಚಿತ್ರದ ನಿರ್ಮಾಪಕ, ಬಾಲಿವುಡ್ ನಿರ್ದೇಶಕ ವಿಪುಲ್ ಷಾ, ಆಕಾಶಕ್ಕೇರುವುದೊಂದೇ ಬಾಕಿ. ಇದೀಗ ಇದೇ ಜಾನ್ ನಾಯಕತ್ವದಲ್ಲಿ ಮತ್ತೊಂದು ಚಿತ್ರ 'ಫೋರ್ಸ್ 2' ಮಾಡಲು ರೆಡಿಯಾಗುತ್ತಿದ್ದಾರೆ ವಿಪುಲ್ ಷಾ. ಆದರೆ ನಾಯಕಿ ಜೆನಿಲಿಯಾ ಬದಲು ವಿದ್ಯಾ ಬಾಲನ್! ಅರೇ... ಇದ್ಯಾಕೆ ಅಂತೀರಾ?

ಅದಕ್ಕೆ ಉತ್ತರ ಇಲ್ಲಿದೆ. 2007 ರಲ್ಲಿ ಬಿಡುಗಡೆಯಾಗಿದ್ದ 'ಸಲಾಮ್ ಈ ಇಶ್ಕ್' ಸಿನಿಮಾದಲ್ಲಿ ಈ ಜಾನ್-ವಿದ್ಯಾ ಜೋಡಿ ಎಷ್ಟು ಜನಪ್ರಿಯವಾಗಿತ್ತೆಂದರೆ ಜಾನ್ ಅಬ್ರಹಾಂ ನ ಆಗಿನ ಪ್ರೇಯಸಿ ಆಗಿದ್ದ ಬಿಪಾಶಾ ಬಸು, ವಿದ್ಯಾ ಜೊತೆ ಮಾತುಕತೆಗೂ ಜಾನ್ ಗೆ ಅಡ್ಡಿಪಡಿಸುತ್ತಿದ್ದಳು. ಈಗ ಬಿಪಾಶಾ ಜಾನ್ ನಿಂದ ದೂರವಾಗಿರುವುದರಿಂದ ಆ ತಲೆನೋವು ಯಾರಿಗೂ ಇಲ್ಲ. ಈಗ ಜಾನ್ ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆ, ವಿದ್ಯಾ ಜೊತೆ ರೊಮಾನ್ಸ್ ಗೆ 'ನೋ ರೆಡ್' ಸಿಗ್ನಲ್!

ಮುಂದೆ ಪ್ರಾರಂಭವಾಗಲಿರುವ ಜಾನ್-ವಿದ್ಯಾ ಜೋಡಿಯ ಫೋರ್ಸ್ 2, ಸಂಪೂರ್ಣ ಹೊಸತನದ ಕಥೆಯ ಜೊತೆ ಸಾಹಸವನ್ನೂ ಒಳಗೊಂಡಿದೆ ಎಂಬ ಗುಟ್ಟನ್ನು ರಟ್ಟು ಮಾಡಿದ್ದಾರೆ ನಿರ್ದೇಶಕ ನಿಶಿಕಾಂತ್ ಕಾಮತ್. ಮೂಲ ಚಿತ್ರದ ನಿರ್ದೇಶಕರನ್ನೇ ಇಲ್ಲೂ ಮುಂದುವರಿಸಲಿದ್ದಾರೆ ಈ ಚಿತ್ರಕ್ಕೂ ನಿರ್ಮಾಪಕರಾಗಿರುವ ವಿಪುಲ್ ಷಾ. ಬದಲಾವಣೆ ಎಂದರೆ ಜೆನಿಲಿಯಾ ಬದಲು ಜಾನ್ ಜೋಡಿಯಾಗಿ ಆಯ್ಕೆಯಾಗಿದ್ದಾರೆ, ವಿದ್ಯಾ ಬಾಲನ್. ಮಲೆಯಾಳಂ ಹುಡುಗಿ, ಬಾಲಿವುಡ್ ಬೆಡಗಿ ವಿದ್ಯಾಗೆ ಕಂಗ್ರಾಟ್ಸ್...

English summary
After the instant hit of Force, Producer and Bollywood director Vipul Shah has not only planned to made a sequel to the film but also decided to revive the on-screen romance of John Abraham and Vidya Balan. John and Vidya’s chemistry was very much talked about in Nikhil Advani’s ‘Salaam-E-Ishq’ way back in 2007 and now Vipul Shah ardently wants to revive their romance in ‘Force 2’.
 

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more