ಕರೀನಾ ಕಪೂರ್ ಸೈಫ್ ನಿಖಾಗೆ ಮುಹೂರ್ತ ಫಿಕ್ಸ್
ಬಾಲಿವುಡ್ ಬೆಡಗಿ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ 2012ರಲ್ಲಿ ಇಬರಿಬ್ಬರು ನಿಶ್ಚಿತಾರ್ಥ ನಡೆಯಲಿದ್ದು, ಅದೇ ವರ್ಷ ಅಕ್ಟೋಬರ್‌ನಲ್ಲಿ ಮದುವೆ ಈ ಬಂಧ ಅನುರಾಗದ ಅನುಬಂಧ, ಏಳೇಳು ಜನುಮದಲೂ, ತೀರದ ಸಂಬಂಧ ಎಂದು ಹಾಡಲಿದ್ದಾರೆ.
ಪ್ರೇಮಿಗಳ ದಿನದಂದು ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಿಶ್ಚಿತಾರ್ಥವನ್ನು ಈ ಜೋಡಿ ಅದ್ದೂರಿಯಾಗಿ ಮಾಡಿಕೊಳ್ಳಲಿದ್ದು, ಈಗಾಗಲೆ ಇಬ್ಬರ ಕಡೆಯವರೂ ಮದುವೆ ಬಗ್ಗೆ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಸದ್ಯಕ್ಕೆ ಕರೀನಾ ತಮ್ಮ ಕೈಯಲ್ಲಿರುವ ಚಿತ್ರಗಳನ್ನು ಈ ವರ್ಷಾಂತ್ಯಕ್ಕೆ ಮುಗಿಸಿಕೊಳ್ಳುವ ತಾರಾತುರಿಯಲ್ಲಿದ್ದಾರೆ. ಇವರಿಬ್ಬರ ಶಾದಿಕೆ ಬಾದ್ ಇದೇ ಜೋಡಿಯ 'ಏಜೆಂಟ್ ವಿನೋದ್' ಚಿತ್ರವೂ ತೆರೆಕಾಣಲಿದೆ. ಈಗಾಗಲೆ ಮದುವೆಗೆ 15ದಿನ ನಿಶ್ಚಿತಾರ್ಥಕ್ಕೆ 10 ದಿನ ರಜೆ ಘೋಷಿಸಿಕೊಂಡಿದ್ದಾರೆ. (ಏಜೆನ್ಸೀಸ್)
More from Filmibeat
English summary
The chotte nawab Saif Ali Khan and very beautiful, stylish and versatile Kareena Kapoor are now ready to walk down the aisle. The duo will get engaged in February 2012 and tie the knot in October.
ಕರೀನಾ ಕಪೂರ್ ಸೈಫ್ ಆಲಿ ಖಾನ್ ಮದುವೆ ನಿಶ್ಚಿತಾರ್ಥ ಬಾಲಿವುಡ್ kareena kapoor saif ali khan marriage engagement bollywood


Click it and Unblock the Notifications











