ಮುಂಬೈಗೆ ಮರಳಿದ ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್

Madhuri-Sriram
ಮಾಧುರಿ ದೀಕ್ಷಿತ್ ಹೇಳಿದಂತೆ ಮಾಡಿದ್ದಾರೆ. ಕಳೆದ ಶುಕ್ರವಾರ ಸಂಜೆ, ತಾನು ದಶಕಗಳ ಕಾಲ ರಾಣಿಯಾಗಿ ಮೆರೆದ ಮುಂಬೈ ಬಾಲಿವುಡ್ ಅಂಗಳಕ್ಕೆ ಬಂದಿಳಿದಿದ್ದಾರೆ. ಗಂಡ ಮತ್ತು ಎರಡು ಮಕ್ಕಳ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿಳಿದ ಮಾಧುರಿಗೆ ಅಭಿಮಾನಿಗಳು ಹಾಗೂ ಮಾಧ್ಯಮದವರಿಂದ ಅಭೂತಪೂರ್ವ ಹಾರ್ದಿಕ ಸ್ವಾಗತ ದೊರೆತಿದೆ.

ವಿಮಾನ ನಿಲ್ದಾಣದಲ್ಲಿ ತನ್ನ ಪೋಷಕರ ಜೊತೆ ಒಂದಾದ ಮಾಧುರಿ ತನ್ನ ತವರುಮನೆಯನ್ನು ಕಂಡು ತುಂಬಾ ಖುಷಿಗೊಂಡರು. ತೊಟ್ಟಿದ್ದ ಕಪ್ಪು ಬಟ್ಟೆಯಲ್ಲಿ ಮಿರಮಿರ ಮಿಂಚುತ್ತಿದ್ದ ಮಾಧುರಿ ನೋಡುಗರ ಕಣ್ಣಿಗೆ ಈಗಲೂ ಹಬ್ಬವೇ ಆಗಿದ್ದರು. ಕೇಳಿದ ಪ್ರಶ್ನೆಯೊಂದಕ್ಕೆ "ನನ್ನ ವ್ಯಕ್ತಿತ್ವಕ್ಕೆ ಬಿಗ್ ಬಾಸ್ ಸರಿಹೊಂದುವುದಿಲ್ಲ" ಎಂದು ಚುಟುಕಾಗಿ ಉತ್ತರಿಸಿದರು ಮಾಧುರಿ.

ಈ ಮೊದಲು ಅಮೆರಿಕಾದಿಂದಲೇ ಮಾಧುರಿ ಟ್ವೀಟ್ ಮಾಡಿದ್ದರು, ಅಕ್ಟೋಬರ್ ಮಧ್ಯದಲ್ಲಿ ನಾನು ಮುಂಬೈಗೆ ಮರಳಲಿದ್ದೇನೆ, ತುಂಬಾ ತುಂಬಾ ಖುಷಿಯಾಗುತ್ತದೆ ಎಂದು. ಈಗ ಅವರ ಆಗಮನ ನಿಜವಾಗಿರುವುದರಿಂದ ಅವರ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಈ ಧಕ್ ಧಕ್ ಹುಡುಗಿಯನ್ನು ಯಾರಾದರೂ ಮರೆಯಲು ಸಾಧ್ಯವೇ?!

More from Filmibeat

English summary
Keeping her promise to return in October, Madhuri Dixit Nene returned to India on Friday evening with her husband Dr Sriram Nene and two kids. The actor got a warm welcome at Mumbai International airport from journalists and fans. Looking gorgeous in black, Madhuri looked very smart.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X