For Quick Alerts
  ALLOW NOTIFICATIONS  
  For Daily Alerts

  ವಯಸ್ಕರ ಚಿತ್ರದಲ್ಲಿ ಜಾನ್ ಅಬ್ರಹಾಂ, ಪ್ರಿಯಾಂಕಾ!

  By Rajendra
  |

  ಸೆಕ್ಸ್, ಮಾದಕ ದ್ರವ್ಯ ಹಾಗೂ ದಾಂಪತ್ಯ ದ್ರೋಹ ಕುರಿತು ಹೆಣೆದ ಹಿಂದಿ ಚಿತ್ರ 'ಸಾತ್ ಖೂನ್ ಮಾಫ್'. ಚಿತ್ರದಲ್ಲಿ ಜಾನ್ ಅಬ್ರಹಾಂ ಹಾಗೂ ಪ್ರಿಯಾಂಕಾ ಚೋಪ್ರಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಕೆಲವೊಂದು ಹಾಟ್ ದೃಶ್ಯಗಳ ಕಾರಣ 'ಎ' ಪ್ರಮಾಣ ಪತ್ರವನ್ನು ಕೊಟ್ಟಿದೆ.

  ಈ ಚಿತ್ರದಲ್ಲಿ ಪ್ರಿಯಾಂಕಾಗೆ ಏಳು ಜನ ಗಂಡಂದಿರಲ್ಲಿ ಜಾನ್ ಅಬ್ರಹಾಂ ಕೂಡ ಒಬ್ಬರು. ಬೆಡ್ ರೂಂ ಸರಸ ಸನ್ನಿವೇಶಗಳಲ್ಲಿ ಇಬ್ಬರೂ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಅಭಿನಯಿಸಿ, ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  ಜಾನ್ ಅಬ್ರಹಾಂ ಅಭಿನಯದ ಇದುವರೆಗಿನ ಚಿತ್ರಗಳಲ್ಲಿ ಅತ್ಯಂತ ಬೋಲ್ಡ್ ಅಭಿನಯದ ಚಿತ್ರ ಇದು ಎನ್ನಲಾಗಿದೆ.ಚಿತ್ರದಲ್ಲಿ ಜಾನ್ ಅವರು ಶ್ರೀಮಂತ ವ್ಯಕ್ತಿಯಾಗಿ ಕಾಣಿಸಲಿದ್ದು ಹಲವಾರು ಹುಡುಗಿಯರ ಜೊತೆ ಹಾಸಿಗೆ ಹಂಚಿಕೊಳ್ಳುವ ಪಾತ್ರವಂತೆ. 'ಸಾತ್ ಖೂ ಮಾಫ್' ಚಿತ್ರ ಫೆಬ್ರವರಿ 18ರಂದು ಬಿಡುಗಡೆಯಾಗುತ್ತಿದೆ.

  "ಮೊದಲಿನಿಂದಲೂ ನಾವು ವಯಸ್ಕರ ಚಿತ್ರವನ್ನು ನಿರ್ಮಿಸಬೇಕು ಎಂದುಕೊಂಡಿದ್ದೆವು. ಪ್ರೇಕ್ಷಕರು ಸಹ ಪ್ರೌಢಾವಸ್ಥೆಗೆ ತಲುಪಿದ್ದಾರೆ. ಇನ್ನೂ ಎಷ್ಟು ದಿನ ಎಂದು ಪ್ರೀತಿ, ಪ್ರೇಮ, ಪ್ರಣಯ ಮರ ಸುತ್ತುವ ಚಿತ್ರಗಳನ್ನು ತೆಗೆಯುವುದು. ಚಿತ್ರಲ್ಲಿ ಕೇವಲ ಹಾಟ್ ದೃಶ್ಯಗಳಷ್ಟೇ ಅಲ್ಲದೆ ಮನರಂಜನಾತ್ಮಕ ಅಂಶಗಳು ಇವೆ" ಎಂದು ಚಿತ್ರದ ನಿರ್ಮಾಪಕ ವಿಕಾಸ್ ಬಾಹ್ಲ್ ತಿಳಿಸಿದ್ದಾರೆ. [ಜಾನ್ ಅಬ್ರಹಾಂ]

  English summary
  Priyanka Chopra and John Abraham lead movie Saat Khoon Maaf is an adult film. Vishal Bharadwaj is the director of the movie. The film has received ‘A’ certificate for the censor board. The film is slated to release on February 18.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X