ಕತ್ರಿನಾ ಫಿಟ್ ನೆಸ್ ಗೆ ಸಲ್ಮಾನ್ ಖಾನ್ ಟ್ರೈನರ್
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಡುವೆ ಓತಿಕ್ಯಾತ-ಬೇಲಿ ಸಂಬಂಧ. ಹಿಂದೊಮ್ಮೆ ಅದು ಕಟ್ಟಿಗೆ ಫೆವಿಕೋಲ್ ನಂತೆ ಸಹ ಇತ್ತು. ಎಲ್ಲಾ ಮುಗಿದ ಮೇಲೆ ಅವರಿಬ್ಬರೂ ಈಗ ಸ್ನೇಹಿತರಷ್ಟೇ. ಇಂತಪ್ಪ ಈ ಜೋಡಿ ಈಗ ಫಿಟ್ ನೆಸ್ ಮಂತ್ರ ಜಪಿಸುತ್ತಿದ್ದಾರೆ. ಧೂಮ್ -3 ಚಿತ್ರದ ಟಫ್ ಕ್ಯಾರೆಕ್ಟರ್ ಗಾಗಿ ಕತ್ರಿನಾ ಬಾಡಿ ಫಿಟ್ ಆಗಬೇಕಿದೆ.
ಅದಕ್ಕೆ ಸಲ್ಲೂ ಕತ್ರಿನಾಗೆ ಫಿಟ್ ನೆಸ್ ಟ್ರೈನಿಂಗ್ ಕೊಡುತ್ತಿದ್ದಾರೆ. ಅಂದರೆ ಸಲ್ಲೂ ಫಿಟ್ ನೆಸ್ ಟ್ರೈನಿಂಗ್ ಆರಂಭಿಸಿದ್ದಾರೆ ಅಂತಲ್ಲ. ಹೀಗೇ ಟಿಪ್ಸ್ ಕೊಟ್ಟು ಕತ್ರಿನಾ 'ಟಫ್' ಆಗಿದ್ದಾರಾ ಅಂತ ಆಗಾಗ ಟೆಸ್ಟ್ ಮಾಡುತ್ತಾರೆ. ಈ ಜೋಡಿ 'ಏಕ್ತಾ ಟೈಗರ್' ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.
ಕತ್ರಿನಾಗೆ ಸಲ್ಲು ಫಿಟ್ ನೆಸ್ ಮಂತ್ರ ಹೇಳಿಕೊಡುತ್ತಿರುವುದು ಖುಷಿ ತಂದಿದೆಯಂತೆ. ಉಕ್ಕಿನ ಬಾಡಿ ಹೊಂದಿರುವ ಸಲ್ಲು, 'ಬಾಡಿಗಾರ್ಡ್'ನಂತೆ ಕತ್ರಿನಾ ಜೊತೆಯಿದ್ದರೆ ಖುಷಿ ಆಗುವುದು ಸಹಜ ಬಿಡಿ. ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿರುವ 'ಧೂಮ್ -3' ಚಿತ್ರಕ್ಕೆ ಕತ್ರಿನಾ ಗ್ಲಾಮರ್ ಸೇರಿದರೆ ಧೂಮ್ ಧೂಮ್ ಗ್ಯಾರಂಟಿ. (ಏಜೆನ್ಸೀಸ್)


Click it and Unblock the Notifications











