ಮದುವೆ ಮನೆಯಲ್ಲಿ ಕುಣಿಯಲು ಶಾರುಕ್ ಗೆ ಎರಡು ಕೋಟಿ !!

ಇಲ್ಲಿ ವಿಷಯ ಏನಪ್ಪಾಂದರೆ ಬಾಲಿವುಡ್ ಬಾದಷಾ ಶಾರುಕ್ ಖಾನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಕಾರ್ಯಕ್ರಮ ಕೂಡ ನಡೆಸಿ ಕೊಡಲಿದ್ದಾರೆ. ಶಾರುಕ್ ಅವರ ಈ ಡ್ಯಾನ್ಸ್ ಗೆ ಸಂಭಾವನೆ ಬರೀ 'ಎರಡು ಕೋಟಿ' ಅಂತೇ..
ಈ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್, ಐಶ್ವರ್ಯ, ಆಮೀರ್ ಖಾನ್, ಸಲ್ಮಾನ್ ಖಾನ್, ವಿವೇಕ್ ಒಬೆರಾಯ್ ಕೂಡಾ ಭಾಗವಹಿಸಲಿದ್ದಾರೆ. ಇಲ್ಲಿ ಬರೀ ಶಾರುಕ್ ಡ್ಯಾನ್ಸ್ ಮಾತ್ರ ಅಲ್ಲ, ಜೊತೆಗೆ ಪ್ರಿಯಾಂಕ ಚೋಪ್ರಾ, ಮಲ್ಲಿಕಾ ಶೆರಾವತ್, ಅನುಷ್ಕಾ ಶರ್ಮ ಮತ್ತು ರಣವೀರ್ ಸಿಂಗ್ ಕೂಡ ಹೆಜ್ಜೆ ಹಾಕಲಿದ್ದಾರೆ. ಇವರಿಗೆ ಸಂದಾಯವಾಗುವ ಸಂಭಾವನೆ ಬಾಬ್ತು ಇಂತಿದೆ:
ಶಾರುಕ್ ಖಾನ್ - 2 ಕೋಟಿ ರುಪಾಯಿ
ಪ್ರಿಯಾಂಕ ಚೋಪ್ರಾ - 50 ಲಕ್ಷ
ಮಲ್ಲಿಕಾ ಶೆರಾವತ್ - 25 ಲಕ್ಷ
ಅನುಷ್ಕಾ ಶರ್ಮ - 10 ಲಕ್ಷ
ರಣವೀರ್ ಸಿಂಗ್ - 10 ಲಕ್ಷ
ಆರತಕ್ಷತೆಯಲ್ಲಿ ಭಾಗವಹಿಸುವ ಇತರ ಹೆವಿ ವೈಟ್ ಗಳೆಂದರೆ ಅನಿಲ್ ಕಪೂರ್, ರಾಣಿ ಮುಖರ್ಜಿ, ಅನಿಲ್ ಅಂಬಾನಿ, ಲಾರಾ ದತ್ತಾ, ಮಹೇಶ್ ಭೂಪತಿ ಇತ್ಯಾದಿ... ಇತ್ಯಾದಿ. ಪಿಂಕಿ ಮತ್ತು ಸಂಜಯ್ ರೆಡ್ಡಿ ಅವರ ಪುತ್ರಿ ಮಲ್ಲಿಕಾಳ ಅದ್ದೂರಿ ವಿವಾಹಕ್ಕೆ ಇಂದು ಹೈದರಾಬಾದ್ ನಗರ ಸಾಕ್ಷಿಯಾಗಲಿದೆ.


Click it and Unblock the Notifications











