For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಗೆದ್ದ 'ಕಾಂತಾರ'ಕ್ಕೆ ಹಿಂದಿಯಲ್ಲಿ ಸಿಕ್ಕ ಫಲಿತಾಂಶವೇನು? ಚಿತ್ರ ನೋಡಿದ ಹಿಂದಿ ಪ್ರೇಕ್ಷಕರು ಹೇಳಿದ್ದಿಷ್ಟು

  |

  ಸೆಪ್ಟೆಂಬರ್ 30ರಂದು ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರ ಬಿಡುಗಡೆಗೊಂಡಿತು. ನಿಗದಿತ ಸಂಖ್ಯೆಯ ಚಿತ್ರಮಂದಿರಗಳಲ್ಲಿ ತೆರೆಕಂಡ ಕಾಂತಾರ ಚಿತ್ರ ಕರ್ನಾಟಕದಲ್ಲಿ ಹೊಸ ಸಂಚಲನವನ್ನೇ ಮೂಡಿಸಿತು. ದಿನದಿಂದ ದಿನಕ್ಕೆ ಕಾಂತಾರ ಚಿತ್ರದ ಶೋಗಳ ಸಂಖ್ಯೆ ಹೆಚ್ಚಾದವು. ಕಾಂತಾರ ಕನ್ನಡ ಚಿತ್ರವನ್ನು ಕನ್ನಡ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಪರ ಭಾಷೆಯ ಪ್ರೇಕ್ಷಕರೂ ಸಹ ಮೆಚ್ಚಿಕೊಂಡರು.

  ಹೌದು, ಕಾಂತಾರ ಚಿತ್ರ ಮೊದಲಿಗೆ ಕೇವಲ ಕನ್ನಡದಲ್ಲಿ ಬಿಡುಗಡೆಗೊಂಡಿದ್ದ ಕಾರಣ ಇತರೆ ಭಾಷೆಯ ಸಿನಿ ರಸಿಕರು ಚಿತ್ರವನ್ನು ಕನ್ನಡದಲ್ಲಿಯೇ ವೀಕ್ಷಿಸಿ ಚಿತ್ರವನ್ನು ತಮ್ಮ ಭಾಷೆಗಳಿಗೂ ಡಬ್ ಮಾಡಿದರೆ ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅದರಂತೆ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿದೆ.

  ಮೊದಲಿಗೆ ಕಾಂತಾರ ಹಿಂದಿ ಅವತರಣಿಕೆ ಬಿಡುಗಡೆಯಾಗಿದ್ದು, ಇಂದು ( ಅಕ್ಟೋಬರ್ 14 ) 2500ಕ್ಕೂ ಹೆಚ್ಚು ಪರದೆಗಳಲ್ಲಿ ಕಾಂತಾರ ಹಿಂದಿ ತೆರೆಕಂಡಿದೆ. ಇನ್ನು ಕಾಂತಾರ ಚಿತ್ರ ಕನ್ನಡದಲ್ಲಿ ಬಿಡುಗಡೆಗೊಂಡಾಗ ಪಡೆದುಕೊಂಡ ಹಿಟ್ ಟಾಕ್ ಹಿಂದಿಗೂ ಸಿಕ್ತಾ, ಕಾಂತಾರ ಹಿಂದಿಯ ಮೊದಲ ಪ್ರದರ್ಶನ ವೀಕ್ಷಿಸಿದ ಸಿನಿ ರಸಿಕರು ಚಿತ್ರದ ಕುರಿತು ಹೇಳಿದ್ದೇನು ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ.

  ದಕ್ಷಿಣ ಭಾರತ ಚಿತ್ರರಂಗದವರು ಪರಿಣಿತರು

  ದಕ್ಷಿಣ ಭಾರತ ಚಿತ್ರರಂಗದವರು ಪರಿಣಿತರು

  ಕಾಂತಾರ ಹಿಂದಿ ಚಿತ್ರವನ್ನು ವೀಕ್ಷಿಸಿದ ನಂತರ ಟ್ವೀಟ್ ಮಾಡಿರುವ ಸೂರ್ಯನ್ಷ್ ಎಂಬ ಬಾಲಿವುಡ್ ಸಿನಿ ಪ್ರೇಕ್ಷಕ ತಮ್ಮ ನಾಡಿನ ಕಲೆ, ಸಂಸ್ಕೃತಿ ಹಾಗೂ ಆಚರಣೆಯನ್ನು ಕತೆಯನ್ನಾಗಿ ತೆರೆ ಮೇಲೆ ತೋರಿಸುವುದರಲ್ಲಿ ದಕ್ಷಿಣ ಭಾರತ ಚಿತ್ರರಂಗದವರು ಪರಿಣಿತರು ಎಂದು ಬರೆದುಕೊಂಡಿದ್ದಾರೆ.

  ಒಳ್ಳೆಯ ರೇಟಿಂಗ್

  ಒಳ್ಳೆಯ ರೇಟಿಂಗ್

  ಇನ್ನು 'ಸೌತ್ ಹಿಂದಿ ಡಬ್ಬ್‌ಡ್ ಮೂವೀಸ್ ಎಂಬ ಪೇಜ್ ಟ್ವಿಟರ್ ವೇದಿಕೆಯಲ್ಲಿ ಟ್ವೀಟ್ ಮಾಡಿದ್ದು 5 ಅಂಕಗಳಿಗೆ 4.75 ಅಂಕಗಳನ್ನು ನೀಡಿ ನೋಡಲೇಬೇಕಾದ ಚಿತ್ರ ಎಂದು ಬರೆದುಕೊಂಡಿದ್ದಾರೆ.

  ಈ ಚಿತ್ರವನ್ನು ಮಿಸ್ ಮಾಡಿಕೊಂಡರೆ ನಿಮಗೇ ಬಿಗ್ ಲಾಸ್

  ಈ ಚಿತ್ರವನ್ನು ಮಿಸ್ ಮಾಡಿಕೊಂಡರೆ ನಿಮಗೇ ಬಿಗ್ ಲಾಸ್

  ಗಬ್ಬರ್ ನಿರು ಎಂಬ ಸಿನಿ ಪ್ರೇಕ್ಷಕ ಕಾಂತಾರ ಹಿಂದಿ ಡಬ್ಬಿಂಗ್ ವೀಕ್ಷಿಸಿದ ನಂತರ ಇಂಥಹ ಮಾಸ್ಟರ್‌ಪೀಸ್ ಅನ್ನು ಮಿಸ್ ಮಾಡಿಕೊಂಡರೆ ಅದು ನಿಮಗೇ ನಷ್ಟ ಎಂದು ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ.

  ಬ್ರಹ್ಮಾಸ್ತ್ರಕ್ಕಿಂತ 1000 ಪಟ್ಟು ಉತ್ತಮ

  ಬ್ರಹ್ಮಾಸ್ತ್ರಕ್ಕಿಂತ 1000 ಪಟ್ಟು ಉತ್ತಮ

  ಕಾಂತಾರ ಹಿಂದಿ ಚಿತ್ರವನ್ನು ವೀಕ್ಷಿಸಿದ ನಂತರ ಟ್ವೀಟ್ ಮಾಡಿರುವ ಶಾನವಿ ಎಂಬ ಚಿತ್ರ ಪ್ರೇಮಿ ಐದಕ್ಕೆ ಐದು ಅಂಕ ನೀಡಿದ್ದಾರೆ. ಚಿತ್ರದ ಹ್ಯಾಂಗ್‌ಓವರ್‌ನಿಂದ ಆಚೆ ಬರಲಾಗುತ್ತಿಲ್ಲ, ಅದರಲ್ಲಿಯೂ ಕೊನೆಯ ಮೂವತ್ತು ನಿಮಿಷಗಳು ಅತ್ಯದ್ಭುತ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಾಂತಾರ ಚಿತ್ರ ಬ್ರಹ್ಮಾಸ್ತ್ರಕ್ಕಿಂತ ಸಾವಿರ ಪಟ್ಟು ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.

  English summary
  1000 percent better than Brahmastra; Audience twitter review for Kantara hindi version. Read on
  Friday, October 14, 2022, 14:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X