»   » ಇಮ್ರಾನ್ ಖಾನ್‌ಗೆ ಕತ್ರಿನಾ ಕೈಫ್ ಕಪಾಳಮೋಕ್ಷ!

ಇಮ್ರಾನ್ ಖಾನ್‌ಗೆ ಕತ್ರಿನಾ ಕೈಫ್ ಕಪಾಳಮೋಕ್ಷ!

Posted By:
Subscribe to Filmibeat Kannada

ಇಮ್ರಾನ್ ಖಾನ್ ಅಂತಹ ತಪ್ಪು ಏನು ಮಾಡಿದನೋ ಏನೋ ಗೊತ್ತಿಲ್ಲ. ಕತ್ರಿನಾ ಕೈಫ್ ಮಾತ್ರ ಆತನ ಕೆನ್ನೆಯನ್ನೂ ಕಡುಬಿನ ತರಹ ಊದಿಸಿದ್ದಾರೆ. ಅದೂ ಒಂದಲ್ಲ ಎರಡಲ್ಲ 16 ಸಲ ಕೆನ್ನೆಗೆ ಬಾರಿಸಿದ್ದಾರೆ ಕತ್ರಿನಾ ಕೈಫ್. ಈ ಘಟನೆ ನಡೆದದ್ದು ಬಾಲಿವುಡ್‌ ಚಿತ್ರ 'ಮೇರೆ ಬ್ರದರ್ ಕಿ ದುಲ್ಹನ್' ಚಿತ್ರೀಕರಣದಲ್ಲಿ.

ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಝಾಫರ್ ಆಕ್ಷನ್ ಎನ್ನುತ್ತಿದ್ದಂತೆ ಇಮ್ರಾನ್‌ಗೆ ಕೆನ್ನೆಗೆ ಕತ್ರಿನಾ ತಾಟಬೇಕು. ಒಮ್ಮೆ ಕೆನ್ನೆಗೆ ಬಾರಿಸಿದ್ದಾರೆ, ಸೀನ್ ಸರಿಯಾಗಿ ಬಂದಿಲ್ಲ ಎಂದು ಮತ್ತೆ ಮತ್ತೆ ಬಾರಿಸಿ 16ನೇ ಏಟಿಗೆ ಈಗ ಕರೆಕ್ಟಾಗಿ ಬಂದಿದೆ ಶಾಟ್ ಓಕೆ ಮಾಡಿ ಎಂದಿದ್ದಾರೆ.

ಅಷ್ಟೊತ್ತಿಗಾಗಲೆ ಇಮ್ರಾನ್ ಮೂತಿ ಕಟಾವಿಗೆ ಬಂದಟೊಮೆಟೋ ಹಣ್ಣಿನಂತಾಗಿತ್ತು. ಇಮ್ರಾನ್ ಮೇಲೆ ಅದೇನು ಸೇಡಿತ್ತೋ ಏನೋ ಹೀಗೆ ಚಿತ್ರೀಕರಣದಲ್ಲಿ ಕತ್ರಿನಾ ತೀರಿಸಿಕೊಂಡಿದ್ದಾರೆ. "ಮೊದಲು ಕೆನ್ನೆಗೆ ಹೊಡೆದಾಗ ಅಂಥಹಾ ಫೀಲ್ ಏನೂ ಆಗಲಿಲ್ಲ. ಸೀನ್ ಫರ್ಫೆಕ್ಟ್ ಆಗಿ ಬರಬೇಕಾಗಿತ್ತು. ಹಾಗಾಗಿ ಮತ್ತೆ ಮತ್ತೆ ಟ್ರೈ ಮಾಡಿ ಕೊನೆ ಎಕ್ಸ್‌ಫರ್ಟ್ ಆದೆ" ಎಂದಿದ್ದಾರೆ ಕತ್ರಿನಾ. (ಏಜೆನ್ಸೀಸ್)

English summary
Bollywood actor Imran Khan got 16 slaps from his co-star Katrina Kaif for a scene in Mere Brother Ki Dulhan. Not fully convinced with the slapping scene, Kat insisted re-shooting of the scene and she gave retakes after retakes and reached perfection only after slapping Imran Khan 15 times.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada