ಸ್ಟಾರ್ ಪಟ್ಟಕ್ಕೆ ಆತ್ಮವನ್ನೇ ಪಣಕ್ಕಿಟ್ಟ ಖಿಲಾಡಿ ಅಕ್ಷಯ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಹಳ ದಿನಗಳಿಂದ ದೊಡ್ಡದೊಂದು ಯಶಸ್ಸಿಗಾಗಿ ಕಾದಿದ್ದರು. ಅದು ಹೌಸ್ ಫುಲ್ 2 ಚಿತ್ರದಿಂದ ಅವರಿಗೀಗ ದೊರೆತಿದೆ. "ಬಾಕ್ಸ್ ಆಫೀಸಿನಲ್ಲಿ ದಾಖಲೆ ಮೆರೆಯುವುದು ನನಗೆ ಮುಖ್ಯವಲ್ಲ; ಆದರೆ ಪ್ರೇಕ್ಷಕರು ನನ್ನನ್ನು ಸ್ಟಾರ್ ಎಂದು ಒಪ್ಪಿಕೊಳ್ಳುವುದು ಮುಖ್ಯ" ಎಂದಿದ್ದಾರೆ.
ಸ್ಟಾರ್ ಆಗುವ ಹಾದಿ ಬಹಳ ಕಠಿಣದ್ದು ಎಂದಿರುವ ಅಕ್ಷಯ್, ಅದಕ್ಕಾಗಿ ನಾನು ಹಗಲೂ ರಾತ್ರಿ ಎನ್ನದೇ ಪ್ರತಿ ದಿನ ಪ್ರತಿ ಕ್ಷಣ ನನ್ನ ಆತ್ಮವನ್ನೇ ಪಣಕ್ಕಿಟ್ಟಿದ್ದೇನೆ. ಏಕೆಂದರೆ ನಮ್ಮ ಚಿತ್ರ ದಾಖಲೆ ಆಗದಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಕನಿಷ್ಠ 100 ಕೋಟಿ ಗಳಿಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ ನಮಗೆ ಮುಂದೆ ಚಿತ್ರಗಳೇ ಸಿಗುವುದಿಲ್ಲ" ಎಂದಿದ್ದಾರೆ.
ಮುಂದುವರಿದ ಅಕ್ಷಯ್ "ಯಾರೇ ಆಗಲಿ, ನಟ ಎನಿಸಿಕೊಳ್ಳಲು ಆತನಿಗೆ ಅದರಲ್ಲಿ ಆಸಕ್ತಿ, ಕ್ರೇಜ್ ಇರಬೇಕು. ಆದರೆ ಅದರಲ್ಲಿ ದುಡ್ಡು ಮಾಡಲು ಆತನಿಗೆ ಅವಕಾಶವನ್ನು ಕ್ಯಾಷ್ ಮಾಡಿಕೊಳ್ಳುವುದು ಗೊತ್ತಿರಬೇಕು. ಆದರೆ ಸ್ಟಾರ್ ಆಗುವುದು ಇದೆರಡಕ್ಕಿಂತಲೂ ಕಠಿಣ ಸವಾಲು. ಆತ ಪ್ರತಿ ಕ್ಷಣ ತನ್ನ ಆತ್ಮವನ್ನೇ ಪಣಕ್ಕಿಡಬೇಕಾಗುತ್ತದೆ" ಎಂದು ಮಾರ್ಮಿಕಾವಿ ನುಡಿದಿದ್ದಾರೆ. (ಏಜೆನ್ಸೀಸ್)
More from Filmibeat
English summary
Akshay Kumar in an interview to a website said that it's not easy being a star and a star sells his soul everyday and every minute.


Click it and Unblock the Notifications












