For Quick Alerts
  ALLOW NOTIFICATIONS  
  For Daily Alerts

  ಸಿದ್ಧಾರ್ಥ್‌ನನ್ನು ಅಪ್ಪಿ ದೀಪಿಕಾ ಪಡುಕೋಣೆ ಕೊಟ್ಟ ಪಪ್ಪಿ

  By Rajendra
  |

  ದೀಪಿಕಾ ಪಡುಕೋಣೆ ಅಪ್ಪಿ ತಪ್ಪಿ ಕೊಟ್ಟ ಪಪ್ಪಿ ಇದಲ್ಲ. ಹಾಗಂತ ಇದು ಕದ್ದುಮುಚ್ಚಿ ಕೊಟ್ಟ ಪಪ್ಪಿಯೂ ಅಲ್ಲ. ದೀಪಿಕಾ ತನ್ನ ಪೋಷಕರ ಎದುರೇ ಸಿದ್ಧಾರ್ಥ್ ಮಲ್ಯನನ್ನು ಅಪ್ಪಿ ಪ್ರೀತಿಯಿಂದ ಕೊಟ್ಟ ಪಪ್ಪಿ ಇದು. ಇಪ್ಪತ್ತೈದನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕೋಪನ್ ಹೇಗನ್‌ನಲ್ಲಿ ಸಿದ್ಧಾರ್ಥ್‌ಗೆ ಒಳ್ಳೆಯ ಉಡುಗೊರೆಯನ್ನೇ ಕೊಟ್ಟಿದ್ದಾರೆ ದೀಪಿಕಾ.

  ದೀಪಿಕಾ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಕೋಪನ್ ಹೇಗನ್‌ಗೆ ಸಿದ್ಧಾರ್ಥ್ ಹಾರಿದ್ದ. ಸಿದ್ಧಾರ್ಥ್‌ನನ್ನು ನೋಡಿದ್ದೇ ತಡ ದೀಪಿಕಾ ಪಂಚರಂಗಿ ಚಿಟ್ಟೆಯಾಗಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ಸಿದ್ಧಾರ್ಥ್ ಬಂದಅಮಿತಾನಂದವನ್ನು ತಡೆಯಲಾಗದೆ ಬಿಗಿದಪ್ಪಿ ಪಪ್ಪಿ ಕೊಟ್ಟಿದ್ದು ಬಾಲಿವುಡ್‌ನಲ್ಲಿ ಸಖತ್ ಸುದ್ದಿಯಾಗಿದೆ.

  ಬಳಿಕ ಇವರಿಬ್ಬರೂ ಕೋಪನ್ ಹೇಗನ್‌ನಲ್ಲಿ ಕೈಕೈ ಹಿಡಿದು ಸುತ್ತಾಡಿದ್ದಾಗಿ ಸುದ್ದಿ ಇದೆ. ಇತ್ತ್ತೀಚೆಗೆ ಈ ಜೋಡಿ ತಮ್ಮ ಬಗೆಗೆ ಬರುತ್ತಿರುವ ಗಾಸಿಪ್ ಗಳಿಗೆ ಕಿವಿಗೊಡದೆ ತಮ್ಮ ಪಾಡಿಗೆ ತಾವು ಜೋಡಿ ಹಕ್ಕಿಗಳಂತೆ ವಿಹರಿಸುತ್ತಿದ್ದಾರೆ. [ಚುಂಬನ]

  English summary
  Bollywood actress Deepika Padukone hugged and smooch Siddharth Mallya in the presence of her parents at Copenhagen. She headed to her birth place Copenhagen to celebrate New Year and her 25th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X