ನೀನೆಲ್ಲೋ ನಾನಲ್ಲೆ ದೀಪಿಕಾ ಜೊತೆ ಸಿದ್ಧಾರ್ಥ್ ಮಲ್ಯ

By Rajendra

ನೀನೆಲ್ಲೋ ನಾನಲ್ಲೆ ಈ ಜೀವ ನಿನ್ನಲೆ ಎಂದು ಈ ಬಾರಿ ಮತ್ತೊಮ್ಮೆ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ರೆಡ್ ಹ್ಯಾಂಡೆಡ್ ಆಗಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಾರೆ. ಆದರೆ ಈ ಬಾರಿ ಕಣ್ಣಾಮುಚ್ಚ್ಚಾಲೆ ಆಡುತ್ತಾ ಸಿಕ್ಕಿಬಿದ್ದಿಲ್ಲ. 'ಆರಕ್ಷಣ್' ಚಿತ್ರ ನೋಡುತ್ತಾ ಬಲೆಗೆ ಬಿದ್ದಿದ್ದಾರೆ.

ಮುಂಬೈನಲ್ಲಿ ಏರ್ಪಡಿಸಿದ್ದ ದೀಪಿಕಾರ ಹೊಚ್ಚ ಹೊಸ ಚಿತ್ರ 'ಆರಕ್ಷಣ್' ವಿಶೇಷ ಪ್ರದರ್ಶನಕ್ಕೆ ದೀಪಿಕಾ ಜೊತೆ ಜೂನಿಯರ್ ಮಲ್ಯಾ ಕೂಡ ಆಗಮಿಸಿದ್ದ. ಕೆಂಪುಬಣ್ಣದ ಸಲ್ವಾರ್ ಕಮೀಜ್ ತೊಟ್ಟಿದ್ದ ದೀಪಿಕಾಗೆ ಟೀ ಶರ್ಟ್, ಬ್ಲೂ ಜೀನ್ಸ್ ಪ್ಯಾಂಟ್ ‌ನಲ್ಲಿ ಸಿದ್ಧಾರ್ಥ್ ಕಂಗೊಳಿಸುತ್ತಿದ್ದ.

ಇಬ್ಬರೂ ಒಂದೇ ಕಾರಿನಲ್ಲಿ ಬಂದದ್ದು ವಿಶೇಷ. ಇಬ್ಬರೂ ಕಾರಿನಿಂದ ಹೊರಬರುತ್ತಿದ್ದಂತೆ ಕ್ಯಾಮೆರಾ ಕಣ್ಣಿನಲ್ಲಿ ಬಂಧಿಯಾದರು. ಬಳಿಕ ಇಬ್ಬರೂ ಚಿತ್ರಮಂದಿರದ ಕತ್ತಲಲ್ಲಿ ಕಾಣೆಯಾಗಿದ್ದಾಗಿ ಬಾಲಿವುಡ್ ಮೂಲಗಳು ತಿಳಿಸಿವೆ. ಇವರಿಬ್ಬರು ತಮ್ಮ ನಡುವೆ ಏನಿಲ್ಲಾ ಏನಿಲ್ಲಾ ಎನ್ನುತ್ತಲೆ ಪತ್ರಕರ್ತರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೆ ಇರುವುದು ವಿಶೇಷ. (ಏಜೆನ್ಸೀಸ್)

More from Filmibeat

English summary
Deepika Padukone doesn’t like speaking about her beau Siddhath Mallya but she doesn't mind clicking with the Mallya junior. She was spotted with Sid at Ketnav for the special screening of Aarakshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X