ಜೆನಿಲಿಯಾ ಜೊತೆ ಜಾನ್ ಅಬ್ರಹಾಂ ಪಾಣಿಗ್ರಹಣ
ವೇದ ಮಂತ್ರಗಳ ಸಾಕ್ಷಿಯಾಗಿ ಬಾಲಿವುಡ್ ತಾರೆ ಜೆನಿಲಿಯಾ ಮತ್ತು ನಟ ಜಾನ್ ಅಬ್ರಹಾಂ ಮದುವೆ ನಡೆದುಹೋಗಿದೆ. ಜೆನಿಲಿಯಾ ಹಾಗೂ ಜಾನ್ ಅಬ್ರಹಾಂ ಹಾರ ಬದಲಾಯಿಸಿಕೊಂಡ ಶುಭ ಘಳಿಗೆಯಿದು. ಹಾಗಿದ್ದರೆ ಜೆನಿಲಿಯಾ ಪ್ರಿಯತಮ ರಿತೇಶ್ ದೇಶ್‌ಮುಖ್ ಪಾಡೇನು? ಬಿಪಶಾ ಬಸು ಏನಾಗಬೇಡ?
ನೀವು ಅಂದುಕೊಂಡಂತೆ ಏನೇನೂ ಆಗಲ್ಲ. ಆದರೆ ಮದುವೆಯಂತೂ ಆಗಿದೆ! ಆದರೆ ರಿಯಲ್ ಅಲ್ಲ ರೀಲ್ ಮದುವೆಯಿದು. ನಿಶಿಕಾಂತ್ ಕಾಮತ್ ಅವರ 'ಫೋರ್ಸ್' ಚಿತ್ರಕ್ಕಾಗಿ ಈ ಮದುವೆ ಸನ್ನಿವೇಶವನ್ನು ಇತ್ತೀಚಿಗೆ ಚಿತ್ರೀಕರಿಸಲಾಯಿತು. ವಿಶೇಷ ಎಂದರೆ ಈ ಮದುವೆ ಮಾಡಿಸಲು ಜೂನಿಯರ್ ಕಲಾವಿದರು ಸಿಗದೆ ಇದ್ದ ಕಾರಣ ರಿಯಲ್ ಪುರೋಹಿತರನ್ನೇ ಕರೆಸಲಾಗಿತ್ತು.
ಇವರಿಬ್ಬರಿಗೂ ಮದುವೆ ಮಾಡಿಸಿದ ಪುರೋಹಿತ ಭಗವತ್ ಮಾತನಾಡುತ್ತಾ, ಇದು ಸಿನಿಮೀಯ ಮದುವೆಯಾದರೂ ನಿಜವಾದವೇದ ಮಂತ್ರಗಳ ಸಾಕ್ಷಿಯಾಗಿ ನಡೆಯಿತು. ಚಿತ್ರೀಕರಣಕ್ಕೆ ನಿಜವಾದ ಮಂಗಳಸೂತ್ರ, ಹೂವಿನ ಹಾರಗಳನ್ನು ಬಳಸಿಕೊಳ್ಳಲಾಗಿತ್ತು. ಇಬ್ಬರೂ ಸಪ್ತಪದಿ ಕೂಡ ತುಳಿದರು ಎಂದಿದ್ದಾರೆ. (ಏಜೆನ್ಸೀಸ್)
More from Filmibeat
English summary
Bollywood actress Genelia married to co-star John Abraham while they were shooting for Nishikant Kamat’s Force. In that movie there is a scenes where the actor and actress get married, for that scene the movie makers called a real pandit instead of a junior artiste.
ಜೆನಿಲಿಯಾ ಮದುವೆ ಬಾಲಿವುಡ್ ಜಾನ್ ಅಬ್ರಹಾಂ ಗಾಸಿಪ್ ವಿವಾಹ genelia dsouza marriage john abraham bollywood gossip wedding


Click it and Unblock the Notifications











