ಪೂನಂ ಪಾಂಡೆ ಈಗ 'ಅಪಾಯದ ಖಿಲಾಡಿ'

By Srinath

ಭಾರತ ವಿಶ್ವ ಕಪ್ ಗೆದ್ದರೆ ನೀವು ಎಲ್ಲೇ ಹೇಳಿ ಅಲ್ಲಿ ನಾನು ಬೆತ್ತಲೆಯಾಗುವುದಾಗಿ ಬೆದರಿಕೆಯೊಡ್ಡಿದ್ದ ಪೂನಂ ಪಾಂಡೆ ಎಂಬ ಹಸಿಹಸಿ ರೂಪದರ್ಶಿ ಈಗೇನ್ಮಾಡ್ತಿದ್ದಾಳೆ? 19 ವರ್ಷದ ಈ ಖಿಲಾಡಿ ನಿಜವಾದ ಕ್ರಿಕೆಟ್ ಖಿಲಾಡಿಗಳಿಗೆ ಈ ರೀತಿ ಆಸೆ ತೋರಿಸಿದ ಬಳಿಕ ಜನಪ್ರಿಯ 'ಖತರೋಂ ಕೆ ಖಿಲಾಡಿ 4' ಎಂಬ ರಿಯಾಲ್ಟಿ ಷೋದಲ್ಲಿ ರಿಯಲಿ ಕಾಣಿಸಿಕೊಳ್ಳುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾಳೆ. ಅಲ್ಲಿ ಇನ್ನೇನೆಲ್ಲ ಖಿಲಾಡಿತನ ತೋರುತ್ತಾಳೋ ಕಾದು ನೋಡುವಾ! ಅಷ್ಟೆಲ್ಲ ಮಾಡಿದರೆ ಖಂಡಿತ 50 ಲಕ್ಷ ರುಪಾಯಿ ಗಿಟ್ಟಿಸುವ ನಗ್ನಾವಕಾಶ ಅವಳದಾಗಲಿದೆ.

ಅಂದಹಾಗೆ, ಖ್ಯಾತ ನಟ ಅಕ್ಷಯ್ ಕುಮಾರ್ ನಡೆಸಿಕೊಡುವ ಈ ರಿಯಾಲ್ಟಿ ಷೋನಲ್ಲಿ ಪೂನಂ ಏಪ್ರಿಲ್ ಕೊನೆಗೆ ಕಾಣಿಸಿಕೊಳ್ಳಲಿದ್ದಾಳೆ. ವಿಷಯ ಗೊತ್ತಾ, ಅಸಲಿಗೆ ಪೂನಂ ಬೆತ್ತಲೆ ವಿಷಯ ನಮ್ಮ ಕಿವಿಗೂ ಬೀಳಲಿಲ್ಲ, ಕಣ್ಣಿಗೂ ಬೀಳಲಿಲ್ಲ ಎಂದು ಭಾರತ ತಂಡದ ಖಿಲಾಡಿಯೊಬ್ಬರು ಇತ್ತೀಚೆಗೆ ಪಿಸುಗುಟ್ಟಿದ್ದಾರೆ. ಆದರೆ ಜನ ಪೂನಂಗಾಗಿ ಅತ್ಯಧಿಕ ಪ್ರಮಾಣದಲ್ಲಿ ಅಂತರ್ಜಾಲದಲ್ಲಿ ತಡಕಾಡಿ ದಾಖಲೆ ಸೃಷ್ಟಿಸಿದ್ದಾರೆ.

'ರಿಯಾಲ್ಟಿ ಷೋಗಳಿಗೆ ಇಂತಹ ಮಸಾಲೆ ಬೇಕಾಗುತ್ತದೆ. ಹೆಚ್ಚು ಮಸಾಲೆ ಇದ್ದಷ್ಟೂ ವೀಕ್ಷಕರ ಕಣ್ಣು ರಿಯಾಲ್ಟಿ ಷೋಗಳತ್ತ ಸುಳಿದಾಡುತ್ತದೆ. ಟಿವಿ ವೀಕ್ಷಕರು ಖಂಡಿತವಾಗಿಯೂ ಪೂನಂಗಾಗಿ ತಹತಹಿಸುತ್ತಿದ್ದಾರೆ. ಟಿವಿಯಲ್ಲಾದರೂ ಅವಳನ್ನು ನೋಡುವ ಭಾಗ್ಯ ಸಿಗಲಿ ಎಂದು ಪೂನಂ ಅಭಿಮಾನಿಗಳು ಈಗಾಗಲೇ ಚಡಪಡಿಸುತ್ತಿದ್ದಾರೆ. ಅದು ಖಂಡಿತಾ ನೆರವೇರಲಿದೆ. ಈ ಬಾರಿ ನಿರಾಸೆಯಾಗುವುದಿಲ್ಲ' ಎಂದು ಟಿವಿ ಮಂದಿ ಆಶ್ವಾಸನೆ ನೀಡಿದ್ದಾರೆ.

More from Filmibeat

English summary
Model Poonam Pandey will soon be seen as a participant in Khatron Ke Khiladi 4, the reality show hosted by Akshay Kumar which goes on floors in the third week of April. The 19-year-old came in the limelight after she vowed to strip in public if India wins the World Cup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X