ಕರೀನಾ ಮುಟ್ಟಿದ್ದಕ್ಕೆ ಮೇಕಪ್ ಮ್ಯಾನ್‌ಗೆ ಸೈಫ್ ಆವಾಜ್

By Rajendra

ಬಾಲಿವುಡ್ ಮೋಹಕ ತಾರೆ ಕರೀನಾ ಕಪೂರ್ ಮೇಲಿನ ಸೈಫ್ ಆಲಿಖಾನ್‌ ಹುಚ್ಚಾಪಟ್ಟೆ ಪ್ರೀತಿ ಇದು. ಮೇಕಪ್ ಮ್ಯಾನ್ ಕರೀನಾಳನ್ನು ಮುಟ್ಟಿದ್ದಕ್ಕೆ ಸೈಫ್ ಆಲಿಖಾನ್ ಆವಾಜ್ ಹಾಕಿದ್ದಾನೆ. ಆದರೆ ಮೇಕಪ್ ಮ್ಯಾನ್ ನಿಜವಾಗಿಯೂ ಕರೀನಾಳನ್ನು ಮುಟ್ಟಿರಲಿಲ್ಲ. ಸೈಫ್ ಬಲ ತೋಳಿನ ಮೇಲಿನ ಕರೀನಾ ಹಚ್ಚೆಯನ್ನು ಆತ ತಾಕಿದ್ದ ಅಷ್ಟೆ.

ಇಷ್ಟಕ್ಕೆ ರಾಂಗ್ ಆದ ಸೈಫ್ ಆತನ ಮೇಲೆ ಹರಿಹಾಯ್ದಿದ್ದಾಗಿ ಬಾಲಿವುಡ್ ಮೂಲಗಳು ಹೇಳಿವೆ. 'ಆರಕ್ಷಣ್' ಚಿತ್ರದ ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ. ಒಂದು ವೇಳೆ ನಿಜವಾಗಿ ಕರೀನಾಳನ್ನೇ ಮುಟ್ಟಿದ್ದರೆ ಗತಿ ಏನು ಎಂಬುದು ಅಲ್ಲಿನವರ ಪ್ರಶ್ನೆ.

'ಆರಕ್ಷಣ್' ಚಿತ್ರದಲ್ಲಿ ದಲಿತ ಪಾತ್ರದಲ್ಲಿ ಸೈಫ್ ಕಾಣಿಸಲಿದ್ದಾರೆ. ಈ ಪಾತ್ರಕ್ಕೆ ಸಹಜ ಮೆರುಗು ಕೊಡಲು ಸಾಕಷ್ಟು ಸರ್ಕಸ್ ಕೂಡ ಮಾಡಿದ್ದಾನೆ. ಆದರೆ ಆತನ ಬಲತೋಳಿನ ಮೇಲಿನ ಕರೀನಾ ಹಚ್ಚೆಯನ್ನು ಮಾತ್ರ ಯಾರು ತಾಕುವಂತಿಲ್ಲ. ಅಪ್ಪಿತಪ್ಪಿ ಮುಟ್ಟಿದರೆ ಅವರಿಗೆ ಮಂಗಳಾರತಿ, ಅಭಿಷೇಕ ಎರಡು. (ಏಜೆನ್ಸೀಸ್)

More from Filmibeat

English summary
During the shooting of Aarakshan, when the make-up artist is doing his makeup, he strictly asked them to keep distance from the tattoo. A source from the unit of Aarakshan says, Saif required a lot of preparation every day on location. A lot of makeup had to go into making him look normal in the part of a Dalit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X