ಶಾರುಖ್ ಹೆದರಿಸಿ ಯಶಸ್ವಿಯಾದ ವಿವೇಕ್ ಒಬೆರಾಯ್
ನಟ ವಿವೇಕ್ ಒಬೆರಾಯ್ ತಮ್ಮ ಹಳೆಯ, ಆದರೆ ಎಂದೂ ಮರೆಯದ ಬಾಲಿವುಡ್ ಚಿತ್ರದ ಅನುಭವವನ್ನು ನೆನಪಿಸಿಕೊಂಡರು. ಅದು ಆಗಷ್ಟೇ ವಿವೇಕ್ ಬಾಲಿವುಡ್ ನಲ್ಲಿ ಕಣ್ಣು ಬಿಡುತ್ತಿರುವ ಕಾಲದಲ್ಲಿ ಬಂದ ಮಣಿರತ್ನಂ ಚಿತ್ರ ಸಾಥಿಯಾ. ಅದರಲ್ಲಿ ವಿವೇಕ್ ಒಬೆರಾಯ್, ರಾಣಿ ಮುಖರ್ಜಿ ಹಾಗೂ ಬಾಲಿವುಡ್ ಬಾದ್ ಷಾ ಶಾರುಖ್ ಅಭಿನಯಿಸಿದ್ದರು.
ವಿವೇಕ್ ಹೇಳುವಂತೆ, "ನನ್ನ ಹೆಂಡತಿಯ ಪಾತ್ರಧಾರಿ ರಾಣಿ ಮುಖರ್ಜಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾಳೆ. ನಾನಲ್ಲಿ ಹೊರಗಡೆ ಅವಳಿಗಾಗಿ ಕಾಯುತ್ತಿರುವ ದೃಶ್ಯ. ಆ ವೇಳೆಯಲ್ಲಿ ಅಲ್ಲಿಗೆ ಶಾರುಖ್ ಬರುತ್ತಾರೆ. ನಾನು ಕೋಪದಿಂದ ಶಾರುಖ್ ವಿರುದ್ಧ ಡೈಲಾಗ್ ಹೇಳಬೇಕು. ಆ ಕ್ಷಣ ನನ್ನ ಎದುರಿಗೆ ನಾನು ಆರಾಧಿಸುವ ನಟ ನಿಂತಿದ್ದರು"
ಒಂದು ಕ್ಷಣ ಸಾವರಿಸಿಕೊಂಡು ಮುಂದುವರಿದ ವಿವೇಕ್ "ನಾನು ಇದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಎದುರಿಗಿರುವ ಶಾರುಖ್ ಗೆ ಹಿಗ್ಗಾಮುಗ್ಗಾ ಬೈದಾಡಿಬಿಟ್ಟೆ. ಆಗಲೇ ನಾನು ಪಾತ್ರದಲ್ಲಿ ಸಂಪೂರ್ಣವಾಗಿ ಲೀನವಾಗುವುದನ್ನು ಕಲಿತುಕೊಂಡೆ" ಎಂದಿದ್ದಾರೆ ಮುಂಬೈಮಿರರ್ ಸಂದರ್ಶನದಲ್ಲಿ. ಶಾರುಖ್ ಗೆ ಹೆದರಿಸಿ ವಿವೇಕ್ ಶಹಬ್ಬಾಸ್ ಗಿರಿ ಸಂಪಾದಿಸಿದ್ದು ಈಗ ಇತಿಹಾಸ. (ಏಜೆನ್ಸೀಸ್)


Click it and Unblock the Notifications











