ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ಶಿಲ್ಪಾ ಶೆಟ್ಟಿ

By Srinath

shilpa-shetty-tweats-confirms-pregnancy
ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಈ ಹಿಂದೆ ಗಾಳಿ ಸುದ್ದಿಗೆ ಸಿಕ್ಕಿ ಅನೇಕ ಬಾರಿ ಪ್ರೆಗ್ನೆಂಟ್ ಆಗಿದ್ದಾರೆ. ಆದರೆ ಈ ಬಾರಿ ಸ್ವತಃ ಅವರೇ ದೃಢಪಡಿಸಿರುವ ಖಚಿತ ಸುದ್ದಿ ಇದು. ತಾನು ಪ್ರೆಗ್ನೆಂಟ್ ಎಂದು ಕನ್ನಡತಿ ಶಿಲ್ಪಾ ಶೆಟ್ಟಿ ತಮ್ಮ ಟ್ವಿಟರ್ ನಲ್ಲಿ ಘೋಷಿಸಿದ್ದಾರೆ.

ಮೊನ್ನೆಯಷ್ಟೇ ಮತ್ತೊಬ್ಬ ಕನ್ನಡತಿ ಐಶ್ವರ್ಯಾ ರೈ ತಮ್ಮದೇ ತದ್ರೂಪಕ್ಕೆ ಜನ್ಮ ನೀಡಿದ್ದಾರೆ. ಈಗ ಅದೇ ಮಂಗಳೂರು ಬೆಡಗಿ ಶಿಲ್ಪಾ ಸಹ ಅದೇ ಹಾದಿಯಲ್ಲಿದ್ದಾರೆ. ಅಂದಹಾಗೆ ಶಿಲ್ಪಾ ಪ್ರಸ್ತುತ ದೆಹಲಿಯಲ್ಲಿದ್ದಾರೆ.

ಉದ್ಯಮಿ ರಾಜ್‌ ಕುಂದ್ರಾರನ್ನು ವಿವಾಹವಾಗಿರುವ ನಟಿ ಶಿಲ್ಪಾ ಶೆಟ್ಟಿ ಟ್ವಿಟರ್ ನಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದ್ದು, 'ನಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾಗಲಿದೆ. ಮುದ್ದು ಮಗುವಿನ ನಿರೀಕ್ಷೆಯಲ್ಲಿರುವ ನಮಗೆ ಎಲ್ಲರ ಶುಭಾಶೀರ್ವಾದ ಬೇಕು' ಎಂದು ಹೇಳಿದ್ದಾರೆ. 36ರ ಹರೆಯದ ಶಿಲ್ಪಾ 2009ರಲ್ಲಿ ಉದ್ಯಮಿ ರಾಜ್‌ ಕುಂದ್ರಾ ಅವರನ್ನು ಮದುವೆಯಾಗಿದ್ದರು.

ಶಿಲ್ಪಾ ಶೆಟ್ಟಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ನಟಿಯ ಗೆಳತಿ, ರವೀನಾ ಟಂಡನ್ ಟ್ವೀಟ್ ಮೂಲಕ ಹರ್ಷ ಹಂಚಿಕೊಂಡಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಶಿಲ್ಪಾ ಅವರಿಗೆ ಗರ್ಭಪಾತವಾಗಿತ್ತು. ಆದರೆ ಈ ಬಾರಿ ಹಾಗಾಗದಂತೆ ಶಿಲ್ಪಾ ಮತ್ತು ಆಕೆಯ ಪತಿ ರಾಜ್‌ ಕುಂದ್ರಾ ಬಹಳ ಎಚ್ಚರಿಕೆ ವಹಿಸುತ್ತಿದ್ದಾರೆ ಎನ್ನಲಾಗಿದೆ.

ಯೋಗ ಮತ್ತು ಫಿಟ್‌ನೆಸ್‌ ಮಾಡುತ್ತಿರುವ ಶಿಲ್ಪಾ ಶೆಟ್ಟಿ ಅವರು ತನ್ನ ದೇಹಾರೋಗ್ಯದ ಬಗ್ಗೆ ಬಹಳ ಆರೈಕೆಯಲ್ಲಿದ್ದು, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

More from Filmibeat

English summary
B Town queen Shilpa Shetty has confirmed she is pregnant with her first child with businessman husband, Raj Kundra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X