ಲೀಲಾವತಿ ಆಸ್ಪತ್ರೆಯಲ್ಲಿ ವಿದ್ಯಾ ಬಾಲನ್‌ಗೆ ರಹಸ್ಯ ಚಿಕಿತ್ಸೆ!
ಬಾಲಿವುಡ್ ಸೆಕ್ಸಿ ಬೆಡಗಿ ವಿದ್ಯಾಬಾಲನ್ ಲೀಲಾವತಿ ಆಸ್ಪತ್ರೆಯಲ್ಲಿ ಯಾರ ಕಣ್ಣಿಗೂ ಬೀಳದಂತೆ ಸೈಲೆಂಟಾಗಿ ಚಿಕಿತ್ಸೆ ಪಡೆದು ಬಂದಿದ್ದಾರೆ! ಈಕೆ ಚಿಕಿತ್ಸೆ ಪಡೆದು ಬಂದ ಮೇಲೆ ಸುದ್ದಿ ಆಸ್ಪತ್ರೆಯಿಂದ ಹೊರಬಿದ್ದಿದೆ. ಬಿಡುವಿಲ್ಲದಂತೆ ವಿದ್ಯಾ ಚಿತ್ರೀಕರಣದಲ್ಲಿ ತೊಡಗಿಕೊಂಡ ಕಾರಣ ತೀವ್ರ ಆಯಾಸ ಸುಸ್ತು ತಲೆನೋವು ತಾಳಲಾರದೆ ಆಸ್ಪತ್ರೆಗೆ ದಾಖಲಾಗಿದ್ದರು.
ಈಕೆಯ ನಾಡಿಮಿಡಿತವನ್ನು ಪರೀಕ್ಷಿಸಿದ ವೈದ್ಯರು ಒಂದೆರಡು ಗ್ಲೂಕೋಸ್ ಬಾಟಲ್‌ಗಳನ್ನು ಈಕೆಯ ದೇಹಕ್ಕೆ ಹರಿಸಿ ದಣಿವು ಆಯಾಸ ನಿವಾರಿಸಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಸೇಫ್ ಆಗಿ ಮನೆಸೇರಿ ಅಲ್ಲಿ ಒಂದಷ್ಟು ಫಲಾಹಾರ ಸೇವಿಸಿ ರೆಸ್ಟ್ ತೆಗೆದುಕೊಂಡಿದ್ದಾರೆ.
ಸಿಲ್ಕ್ ಸ್ಮಿತಾ ಜೀವನಕತೆಯಾಧಾರಿತ 'ದಿ ಡರ್ಟಿ ಪಿಕ್ಚರ್'ನಲ್ಲಿ ವಿದ್ಯಾ ಬಾಲನ್ ತಮ್ಮ ಅಭಿನಯ ಸಾಮರ್ಥ್ಯವನ್ನು ಧಾರೆ ಎರೆದಿದ್ದಾರೆ. ಈ ಚಿತ್ರದಲ್ಲಿ ಇನ್ನಿಲ್ಲದಂತೆ ಎಕ್ಸ್‌ಫೋಸ್ ಮಾಡಿದ್ದು ಸಿಲ್ಕ್ ಸ್ಮಿತಾ ನಾಚುವಂತೆ ವಿದ್ಯಾ ಅಭಿನಯಿಸಿದ್ದಾರೆ. ಇದೆಲ್ಲದರ ಪರಿಣಾಮ ವಿದ್ಯಾ ಟೈಮಿಗೆ ಸರಿಯಾಗಿ ಊಟ ನಿದ್ದೆ ಮಾಡದೆ ಆರೋಗ್ಯ ಕೆಡಿಸಿಕೊಂಡಿದ್ದರು. ಹಿಮೋಗ್ಲೋಬಿನ್ ಕೊರತೆಯಿಂದ ಬಳಲಿ ಬೆಂಡಾಗಿದ್ದರು. ಈಗ ಚೇತರಿಸಿಕೊಂಡಿದ್ದಾರಂತೆ. (ಏಜೆನ್ಸೀಸ್)


Click it and Unblock the Notifications











