ವಿದ್ಯಾಬಾಲನ್ ಹಳೆ ನೋವಿಗೆ ಹೊಸ ಚಿಕಿತ್ಸೆ
ಬಾಲಿವುಡ್ ನಟಿ ವಿದ್ಯಾಬಾಲನ್ ಅತೀವ ಸ್ನಾಯು ನೋವಿನಿಂದ ಬಳಲುತ್ತಿದ್ದಾರೆ. ಆಕೆಯ ಕೈ ತೋಳಿಗೆ ಬಲವಾಗಿ ಪೆಟ್ಟಾಗಿದೆ. ಕಳೆದ ಎರಡು ತಿಂಗಳಿಂದ ಕೈ ತೋಳಿನ ನೋವು ತೀವ್ರವಾಗಿ ಬಾಧಿಸುತ್ತಿದೆಯಂತೆ. ದಿನದಿಂದ ದಿನಕ್ಕೆ ನೋವಿನ ತೀವ್ರತೆ ಹೆಚ್ಚಾಗುತ್ತಲೆ ಇತ್ತು. ಕಡೆಗೆ ಆಕೆ ಚಿಕಿತ್ಸೆ ಪಡೆಯಲು ಸೋಮವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಕೆಯ ತೋಳಿಗೆ ಏನಾಗಿದೆ ಎಂದು ಪತ್ತೆ ಹಚ್ಚಲು ವೈದ್ಯರು ಹಲವಾರು ಪರೀಕ್ಷೆಗಳನ್ನು ಮಾಡಿದ್ದಾರೆ. ಸ್ನಾಯುಗಳ ಸೆಳೆತದಿಂದ ಹೀಗಾಗಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಭೌತಚಿಕಿತ್ಸೆ (ಫಿಜಿಯೋ ಥೆರಪಿ) ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ರಾಜ್ ಕುಮಾರ್ ಗುಪ್ತ ನಿರ್ದೇಶಿಸುತ್ತಿರುವ No One Killed Jessica ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿದ್ಯಾ ಹೆಚ್ಚಿನ ಪ್ರಯಾಣ ಮಾಡುತ್ತಿದ್ದು ಆಗ ಗಾಯಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ವಿದ್ಯಾ ಅದನ್ನು ಹಗುರವಾಗಿ ತೆಗೆದುಕೊಂಡಿದ್ದರು. ಈಗ ಆ ಹಳೆನೋವು ಆಕೆಯನ್ನು ತೀವ್ರವಾಗಿ ಕಾಡುತ್ತಿದೆ.
ಭಾರವಾದ ವಸ್ತುಗಳು, ಮನೆಯಲ್ಲಿನ ಪಾತ್ರೆ ಪಗಡ, ಕೈಚೀಲ ಎತ್ತುವಂತಿಲ್ಲ ಎಂದು ವೈದ್ಯರು ಕಟ್ಟಾಜ್ಞೆ ಮಾಡಿದ್ದಾರೆ. ತಮ್ಮ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ವಿದ್ಯಾ ಈಗ ಭೌತಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿದ್ಯಾ ಹೌದು ನನ್ನ ತೋಳಿಗೆ ಪೆಟ್ಟಾಗಿದೆ. ಇದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. ಆರು ವಾರಗಳ ಸುದೀರ್ಘ ಪ್ರಯಾಣದಿಂದ ಹೀಗಾಗಿದೆ. ಈ ನೋವನ್ನು ಸುಮಾರು ದಿನಗಳಿಂದ ಕಡೆಗಣಿಸಿದ್ದೆ. ಇನ್ನು ಆಗಲ್ಲಪ್ಪ ಎಂದಿದ್ದಾರೆ.


Click it and Unblock the Notifications











