»   » ಟಾಪ್ ಟೆನ್ ಬಾಲಿವುಡ್ ಸಾಹಸ ನಟರು

ಟಾಪ್ ಟೆನ್ ಬಾಲಿವುಡ್ ಸಾಹಸ ನಟರು

Posted By:
Subscribe to Filmibeat Kannada

ಹಿಂದಿ ಚಿತ್ರಜಗತ್ತಿನ ಟಾಪ್ ಟೆನ್ ಆಕ್ಷನ್ ನಾಯಕ ನಟರ್ಯಾರು? ಎಂಬ ಪ್ರಶ್ನೆಗೆ ಉತ್ತ್ತರ ಇಲ್ಲಿದೆ. ಸ್ವಲ್ಪ ಬದಲಾವಣೆ ಇರಲಿ ಎಂಬ ಕಾರಣಕ್ಕೆ ಅವರೋಹಣ ಕ್ರಮದಲ್ಲಿ ನಾಯಕರ ಹೆಸರನ್ನು ನೀಡಲಾಗಿದೆ.

*ರವಿಕುಮಾರ್, ಬೆಂಗಳೂರು

10. ಅಜಯ್ ದೇವಗನ್:ಬಾಲಿವುಡ್ ಗೆ ಪಾದಾರ್ಪಣೆ ಮಾಡಿದಾಗ ಆರಂಭದಲ್ಲಿ ತಂದೆ ವೀರು ದೇವಗನ್ ರ ಶ್ರೀರಕ್ಷೆ ಇತ್ತು. ನಂತರ ಖಳನಾಯಕನಾಗಿಯೂ ಮಿಂಚಿ ತಂದೆಯಿಂದ ಸೈ ಎನ್ನಿಸಿಕೊಂಡ ನಟ.

9. ಸಲ್ಮಾನ್ ಖಾನ್: ತನ್ನ ಅಂಗ ಸೌಷ್ಠವವನ್ನೇ ನಂಬಿ ಕೊಂಡ ನಟ. ಅದಕ್ಕಾಗಿಯೇ ಅಂಗಿಯನ್ನು ಹೆಚ್ಚಾಗಿ ಬಿಚ್ಚಿ ಕಟು ಮಸ್ತಾದ ದೇಹವನ್ನು ಪ್ರದರ್ಶಿಸಿ ಸಾಹಸ ಪ್ರಧಾನ ಪಾತ್ರಗಳಲ್ಲಿ ಮಿಂಚುತ್ತಾನೆ.

8.ಹೃತಿಕ್ ರೋಷನ್: ಕ್ರಿಷ್ ನಂತಹ ಚಿತ್ರಗಳಲ್ಲಿ ಅದ್ಭುತ ಸಾಹಸ ಮೆರೆದ ನಟ. ಬರೀ ನಾಯಕನ ಪಾತ್ರದಲ್ಲಷ್ಟೇ ಅಲ್ಲ ಖಳನಾಯಕ ಹಾಗೂ ಉಗ್ರಗಾಮಿ ಪಾತ್ರಗಳಲ್ಲೂ ಸಾಹಸ ಮೆರೆದದ್ದುಂಟು.

7.ಜಾಕಿ ಶ್ರಾಫ್:
ಹೆಚ್ಚಾಗಿ ಪೋಲೀಸ್ ಪಾತ್ರಗಳನ್ನೇ ನಂಬಿಕೊಂಡ ನಟ. ಮೊದಲ ಬಾರಿಗೆ ಹಿಂದಿಯ ಫರೀದಾ ಚಿತ್ರದಲ್ಲಿ ಸಾಫ್ಟ್ ಆಗಿ ಕಾಣಿಸಿಕೊಂಡು ನಂತರ ಸಾಹಸ ಪ್ರಧಾನ ಪಾತ್ರಗಳಲ್ಲಿ ತಾನೇನು ಎಂಬುದನ್ನು ನಿರೂಪಿಸಿಕೊಂಡ ನಟ.

6. ಅನಿಲ್ ಕಪೂರ್: ಯಾವ ಕೋನದಿಂದ ನೋಡಿದರೂ ನಾಯಕನಾಗಿಯೇ ಕಾಣಿಸುವ ಗೈರತ್ತಿನ ನಟ. ಆದರೂ ಸಾಹಸ ಪ್ರಧಾನ ಪಾತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

5.ಸಂಜಯ್ ದತ್:
ಎಲ್ಲ ಕೋನಗಳಲ್ಲೂ ಖಳ ನಟನಾಗಿಯೇ ಕಾಣುವ ನಾಯಕ ನಟ. ಕೆಂಡದಂತ ಕಣ್ಣು, ದಢೂತಿ ದೇಹದ ಆಜಾನುಬಾಹು, ಸಾಹಸ ಪ್ರಧಾನ ಪಾತ್ರಗಳಿಗೆ ಒಪ್ಪುವ ಮೈಕಟ್ಟು.

4.ಅಕ್ಷಯ್ ಕುಮಾರ್: ಇಡೀ ಹಿಂದಿ ಚಿತ್ರೋದ್ಯಮದಲ್ಲೇ ಮಾರ್ಷಲ್ ಆರ್ಟ್ಸ್ ಪಟು ತಾನೊಬ್ಬನೆ ಎಂಬ ಹಮ್ಮು. ಸಾಹಸ ಪ್ರಧಾನ ಪಾತ್ರಗಳಲ್ಲಿ ಎದುರಾಳಿಗಳ ಕೆನ್ನೆಗೆ ಬಾರಿಸಬೇಕಾದರೂ ಕಾಲಿಗೆ ಕೆಲಸ ಕೊಡುವ ಆಸಾಮಿ.

3.ಧರ್ಮೇಂದ್ರ:ರಕ್ತ ಸಿಕ್ತ ಪಾತ್ರಗಳಲ್ಲಿ ನಟಿಸಿ ಅದ್ಭುತ ಸಾಹಸ ಮೆರೆದ ನಟ. ಈ ಕಾಲದ ನಟರು ಧರ್ಮೇಂದ್ರರಿಂದ ಕಲಿಯುವುದು ಸಾಕಷ್ಟಿದೆ.

2.ಸನ್ನಿ ಡಿಯೋಲ್:
ಹೊಡಿ ಬಡಿ ದೃಶ್ಯಗಳಲ್ಲಿ ಪಳಗಿದ ನಟ. ಸಾಹಸ ಎಂಬುದು ಅಪ್ಪನಿಂದ ಪಡೆದ ಬಳುವಳಿ. ಅಪ್ಪನಿಂದ ಕಲಿತದ್ದೂ ಸಾಕಷ್ಟಿದೆ.

1. ಅಮಿತಾಬ್ ಬಚ್ಚನ್:ಒಂಬತ್ತು ಇಂಚಿನ ಚಪ್ಪಲಿಯಲ್ಲಿ ಪಾದ ಊರುವಷ್ಟು ದೊಡ್ಡ ನಟ. ಸಾಹಸದಲ್ಲಷ್ಟೇ ಅಲ್ಲ ಎಲ್ಲ ಪಾತ್ರಗಳಲ್ಲೂ ನಂಬರ್ ಒನ್ ನಟ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada