ಖಳನಾಯಕನಾಗಿ ಮತ್ತೊಮ್ಮೆ ಅಮೀರ್ ಖಾನ್
ಬಾಲಿವುಡ್ ನಟ ಅಮೀರ್ ಖಾನ್ ಮತ್ತೊಮ್ಮೆ ಖಳನಟನಾಗಿ ಬೆಳ್ಳಿತೆರೆ ಮೇಲೆ ರಾರಾಜಿಸಲಿದ್ದಾರೆ. ಈ ಹಿಂದೆ ಅವರು 'ಘಜನಿ' ಮತ್ತು 'ಫನಾ' ಚಿತ್ರಗಳಲ್ಲಿ ಅಂಥಹದ್ದೇ ಪಾತ್ರಗಳನ್ನು ಪೋಷಿಸಿದ್ದರು. ಈಗ ಮತ್ತೊಮ್ಮೆ ನಾಯಕ್ ನಹಿ ಖಳನಾಯಕ್ ಹೂ ಮೈ ಎಂದು ಬರಲಿದ್ದಾರೆ.
'ಧೂಮ್' ಚಿತ್ರ ಯಶಸ್ವಿಯಾದ ಬಳಿಕ 'ಧೂಮ್ 2' ಚಿತ್ರ ಬಂದಿತ್ತು. ಇದೇ ಸರಣಿಯಲ್ಲಿ ಈಗ 'ಧೂಮ್ 3' ಸೆಟ್ಟೇರುತ್ತಿದೆ. ಈ ಚಿತ್ರದಲ್ಲಿ ಅಮೀರ್ ಖಳನಾಯಕನಾಗಿ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಈಗಾಗಲೆ ಚಿತ್ರದ ನಿರ್ದೇಶಕ ಆದಿತ್ಯ ಚೋಪ್ರಾ ಚಿತ್ರದ ಕತೆಯನ್ನು ಅಮೀರ್ ಗೆ ಹೇಳಿದ್ದಾರಂತೆ.
ಚೋಪ್ರಾ ಹೇಳಿದ ಕತೆ ಅಮೀರ್ ಅವರಿಗೂ ಹಿಡಿಸಿದೆಯಂತೆ. ಸದ್ಯಕ್ಕೆ ಅಮೀರ್ ನಿರ್ಮಾಣದ 'ಪೀಪ್ಲಿ ಲೈವ್' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಆಗಸ್ಟ್ 13ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಂದಹಾಗೆ 'ಧೂಮ್ 3' ಚಿತ್ರದ ತಾರಾಗಣದಲ್ಲಿ ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ ಹಾಗೂ ಹೃತಿಕ್ ರೋಷನ್ ಮುಖ್ಯಭೂಮಿಕೆಯಲ್ಲಿದ್ದಾರೆ.
More from Filmibeat
ಅಮೀರ್ ಖಾನ್ ಖಳನಟ ಧೂಮ್ ಅಭಿಷೇಕ್ ಬಚ್ಚನ್ ಹೃತಿಕ್ ರೋಷನ್ ಪೀಪ್ಲಿ ಲೈವ್ aamir khan dhoom 3 villain aditya chopra abhishek bachchan hrithik roshan peepli live


Click it and Unblock the Notifications











