ಬಾಲಿವುಡ್ ತಾರೆ ಐಶ್ವರ್ಯ ರೈ ಡೆಲಿವರಿ ಯಾವಾಗ?
ಬಾಲಿವುಡ್ ತಾರೆ ಐಶ್ವರ್ಯ ರೈ ಡೆಲಿವರಿ ಡೇಟ್ ಮೇಲೆ (11.11.11) ಭಾರಿ ಮೊತ್ತದ ಬೆಟ್ ಕಟ್ಟಿದ್ದವರಿಗೆ ತೀವ್ರ ನಿರಾಶೆಯಾಗಿದೆ. ಎಲ್ಲರೂ ಅಂದುಕೊಂಡಂತೆ ಐಶ್ವರ್ಯ ರೈ ನವೆಂಬರ್ 11ರಂದು ಮಗುವಿಗೆ ಜನ್ಮ ನೀಡಿಲ್ಲ. ಮತ್ತೆ ಯಾವಾಗ ಅವರ ಡೆಲಿವರಿ ಎಂದು ಬಾಲಿವುಡ್ ಬಾಬುಗಳು ಮಂಡೆ ಬಿಸಿ ಮಾಡಿಕೊಂಡಿದ್ದಾರೆ.
ಐಶ್ವರ್ಯ ರೈ ಡೆಲಿವರಿ ಡೇಟ್ ಬಗ್ಗೆ ಜ್ಯೋತಿಷಿಗಳು ಭವಿಷ್ಯವಾಣಿಯೂ ಸುಳ್ಳಾಗಿದೆ. ಬುಕ್ಕಿಗಳಿಗೆ ಮಾತ್ರ ಕೋಟಿಗಟ್ಟಲೆ ಲಾಭವಾಗಿದೆ. ಇಷ್ಟಕ್ಕೂ ಐಶ್ವರ್ಯ ರೈ ಡೆಲಿವರಿ ಯಾವಾಗ? ಎಂಬುದೇ ಈಗಿನ ಮಹತ್ವದ ಪ್ರಶ್ನೆ. ಐಶ್ವರ್ಯ ರೈಗೆ ನವಮಾಸಗಳು ತುಂಬಿದ್ದು ಯಾವ ಕ್ಷಣದಲ್ಲಿ ಬೇಕಾದರೂ ಹೆರಿಗೆ ನೋವು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಈಗಾಗಲೆ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಬಿಗಿ ಭದ್ರತೆಗಳು ಜೋರಾಗಿವೆ. ಐಶ್ವರ್ಯ ರೈ 11.11.11ರ ಹಿಂದಿನ ರಾತ್ರಿಯೇ ಆಸ್ಪತ್ರೆಗೆ ಬಂದಿದ್ದರು. ಆದರೆ ಹೆರಿಗೆ ಸಲುವಾಗಿ ಅಲ್ಲ. ರೆಗ್ಯುಲರ್ ಚೆಕಪ್‌ಗಾಗಿ ಎನ್ನುತ್ತವೆ ಮೂಲಗಳು. ಬಹುಶಃ ಇನ್ನೊಂದೆರಡು ದಿನಗಳಲ್ಲಿ ಐಶ್ವರ್ಯ ರೈ ಮುದ್ದಾದ ಮಗುವಿನ ಜನ್ಮ ನೀಡುವ ಸಾಧ್ಯತೆಗಳಿವೆ. (ಏಜೆನ್ಸೀಸ್)


Click it and Unblock the Notifications











