For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಪಾತ್ರ ಅತ್ಯಂತ ಸವಾಲು: ಹೃತಿಕ್ ರೋಶನ್

  |

  ಬಾಲಿವುಡ್ ಎಂಬ ಮಾಯಾನಗರಿಗೆ ಹೃತಿಕ್ ರೋಶನ್ ಎಂಬ ತಾರೆ ಬಂದಿದ್ದು 2000 ಇಸ್ವಿಯಲ್ಲಿ 'ಕಹೋನಾ ಪ್ಯಾರ್ ಹೈ' ಚಿತ್ರದ ಮೂಲಕ. ಬರೋಬ್ಬರಿ ಹನ್ನೊಂದು ವರ್ಷಗಳ ವೃತ್ತಿಜೀವನ ಅನುಭವಿಸಿ ಸಾಗುತ್ತಿರುವ ಬಾಲಿವುಡ್ ನಟ ಹೃತಿಕ್ ರೋಶನ್, "ಈವರೆಗೆ ಮಾಡಿರುವ ಪಾತ್ರಗಳಲ್ಲಿ 1990ರ 'ಅಗ್ನಿಪಥ್' ರೀಮೇಕ್ ಚಿತ್ರದ 'ಆಕ್ಷನ್' ಪಾತ್ರ ಅತ್ಯಂತ ಕಠಿಣ ಹಾಗೂ ಸವಾಲಿನದ್ದು" ಎಂದಿದ್ದಾರೆ.

  1990ರಲ್ಲಿ ಬಿಡುಗಡೆಯಾಗಿದ್ದ ಅಮಿತಾಬ್ ನಟನೆಯ 'ಅಗ್ನಿಪಥ್' ಚಿತ್ರದ ಅವಿಸ್ಮರಣೀಯ 'ವಿಜಯ್ ದೀನನಾಥ್ ಚವ್ಹಾಣ್' ಪಾತ್ರವನ್ನು ಪೋಷಿಸುತ್ತಿರುವ ಹೃತಿಕ್ ಈ ಪಾತ್ರ ಮಾಡಲು ಸಾಕಷ್ಟು ಕಷ್ಟಪಟ್ಟರಂತೆ. ಕಾರಣ, ಬಾಲಿವುಡ್ ಬಿಗ್ ಬಿ ಈಗಾಗಲೇ ಮಾಡಿ ಯಶಸ್ವಿಯಾಗಿ ಮನೆಮಾತಾಗಿರುವ ಚಿತ್ರ.

  ಈ ತಿಂಗಳು, ಜನವರಿ 26ರಂದು ಬಿಡುಗಡೆ ಆಗಲಿರುವ 'ಅಗ್ನಿಪಥ್' ಚಿತ್ರವನ್ನು ಕರಣ್ ಜೋಹರ್ ನಿರ್ಮಿಸಿದ್ದು, ಕರಣ್ ಮಲ್ಹೋತ್ರಾ ನಿರ್ದೆಶನ ಮಾಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಹೃತಿಕ್ ಗೆ ನಾಯಕಿಯಾಗಿದ್ದು ಸಂಜಯ್ ದತ್ 'ವಿಲನ್' ಪಾತ್ರ ಪೋಷಿಸಿದ್ದಾರೆ. ಈ ಚಿತ್ರಕ್ಕೆ ಸಹಜವಾಗಿ ತುಂಬಾ ನಿರೀಕ್ಷೆಯಿದ್ದು ಹೃತಿಕ್, ಪ್ರಿಯಾಂಕರ ಬಗ್ಗೆ ಒಳ್ಳೆಯ ಮಾತನಾಡಿದ್ದೂ ಕೂಡ ಇದಕ್ಕೆ ಕಾರಣ. (ಏಜೆನ್ಸೀಸ್)

  English summary
  Actor Hrithik Roshan says that the remake version of the movie Agneepath, which is scheduled to release on January 26, is the hardest film he has done till date. The Bollywood star is reprising Amitabh Bachchan iconic role Vijay Deenanath Chauhan.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X