For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಶನ್ ಮನೆ ಬಿಟ್ಟು ಹೊಟೇಲಿನಲ್ಲಿ ವಾಸ್ತವ್ಯ

  |

  ಬಾಲಿವುಡ್ ನಟ ಹೃತಿಕ್ ರೋಶನ್ ಸದ್ಯ ಹೊಟೇಲಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಮುಂಬೈನ ಫಿಲಂ ಸಿಟಿ ಸಮೀಪದ ಫೈವ್ ಸ್ಟಾರ್ ಹೊಟೇಲೊಂದರಲ್ಲಿ ಉಳಿದಿಕೊಂಡಿರುವ ಹೃತಿಕ್ ಅವರಿಗೆ ಹೆಂಡತಿಯೊಂದಿಗೆ ಜಗಳವಾಗಿಲ್ಲ. ಬದಲಿಗೆ 'ಕ್ರಿಶ್ 3' ಚಿತ್ರೀಕರಣಕ್ಕೆ ಅನುಕೂಲವಾಗಲೆಂದು ಹೃತಿಕ್ ಹೊಟೇಲಿನಲ್ಲಿ ವಾಸ್ತವ್ಯ ಹೂಡಿದ್ದಾರೆ, ಅಷ್ಟೇ!

  ಮನೆಯಿಂದ ಶೂಟಿಂಗ್ ಸ್ಪಾಟ್ ತುಂಬಾ ದೂರದಲ್ಲಿದೆ. ಅಲ್ಲಿಂದ ದಿನಾ ಬರಲು ಟ್ರಾಫಿಕ್ ಕಿರಿಕಿರಿ ಬೇರೆ. ಹಾಗಾಗಿ ಸಮೀಪದಲ್ಲೇ ಇದ್ದು ಕ್ರಿಶ್ 3 ಚಿತ್ರಕ್ಕಾಗಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತೊಡಗಿಸಿಕೊಂಡಿದ್ದಾರೆ ಹೃತಿಕ್. ಪ್ರತಿಭೆ ಹಾಗೂ ಸ್ಟಾರ್ ಇಮೇಜ್ ಎರಡೂ ಇದ್ದರೂ ಅದ್ಯಾಕೋ ಹೃತಿಕ್ ಗೆ ಸಿಗಬೇಕಾದ ಮಾನ್ಯತೆ ಹಾಗೂ ಬ್ರೇಕ್ ಬಾಲಿವುಡ್ ನಲ್ಲಿ ಸಿಕ್ಕಿಲ್ಲ.

  ಈ ಚಿತ್ರದಲ್ಲಿ ಎಲ್ಲವನ್ನೂ ಪಡೆದುಕೊಳ್ಳುವ ತಯಾರಿಯಲ್ಲಿದ್ದಾರೆ ಹೃತಿಕ್. ಇದೀಗ ಚಿತ್ರೀಕರಣ ಹಂತದಲ್ಲಿರುವ ಈ ಚಿತ್ರದ ಬಗ್ಗೆ ಹೃತಿಕ್ ಬಹಳಷ್ಟು ಭರವಸೆ ಇಟ್ಟಿದ್ದಾರೆ. ಕ್ರಿಶ್ ಹಗೂ ಕ್ರಿಶ್ 2 ನೋಡಿರುವ ಪ್ರೇಕ್ಷಕರು ಈ ಕ್ರಿಶ್ 3 ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಏನಾಗುವದೋ ಕಾದು ನೋಡಬೇಕಾಗಿದೆ. (ಏಜೆನ್ಸೀಸ್)

  English summary
  According to reports Hrithik Roshan is staying in a hotel to avoid long traffic hours. His home is in Juhu, which is very far from where he is shooting.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X