»   »  ಕಾಮಿಡಿ ಕಿಲಾಡಿ ಯಾಗಲು ಹೊರಟ ಕತ್ರಿನಾ ಕೈಫ್

ಕಾಮಿಡಿ ಕಿಲಾಡಿ ಯಾಗಲು ಹೊರಟ ಕತ್ರಿನಾ ಕೈಫ್

Posted By:
Subscribe to Filmibeat Kannada

ಕತ್ರಿನಾ ಕೈಫ್ ಆಗತಾನೆ ಬಾಲಿವುಡ್ ಗೆ ಅಡಿಯಿಟ್ಟ ದಿನಗಳು. ಈಕೆಗೂ ನಟಿಸಲು ಬರುತ್ತದೆಯೇ ಎಂದು ಅನೇಕರು ಮುಸಿಮುಸಿ ನಕ್ಕಿದ್ದುಂಟು. ಆನಂತರ ತೆಗಳಿದವರು ಹೊಗಳುವಂತೆ ಮಾಡಿತು ಈಕೆಯ ನಟನೆ. ಇದಕ್ಕಾಗಿ ತಾನು ಪಟ್ಟ ಪಾಡು ಅಷ್ಟಿಷ್ಟಲ್ಲ ಎನ್ನುತ್ತಿದ್ದಾರೆ ಕತ್ರಿನಾ.

ಏಷ್ಯಾ ಖಂಡಲ್ಲೇ ಅತ್ಯಂತ ಸೆಕ್ಸಿಯಸ್ಟ್ ಮಹಿಳೆ ಎಂಬ ಅಗ್ರ ಪಟ್ಟಕ್ಕೆ ಪಾತ್ರವಾದ ನಂತರವಂತೂ ಕತ್ರಿನಾ ಖಾತೆಗೆ ಮತ್ತಷ್ಟು ಚಿತ್ರಗಳು ಜಮೆಯಾಗಿವೆ. ನಟನೆಗಿಂತಲೂ ಈಕೆಯ ಸೌಂದರ್ಯರಾಶಿ ಕಂಡು ಬೆರಗಾದವರೆ ಹೆಚ್ಚು. ಆದರೆ ತಾನು ಸೌಂದರ್ಯ ರಸಕ್ಕಿಂತಲೂ ಹಾಸ್ಯರಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದೇನೆ ಎನ್ನುತ್ತಿದ್ದಾರೆ ಕತ್ರಿನಾ. ಇತ್ತೀಚೆಗೆ ಆಕೆ ಹಾಸ್ಯ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದು ಪ್ರೇಕ್ಷಕರನ್ನು ಮತ್ತ್ತಷ್ಟು ನಕ್ಕು ನಲಿಸಬೇಕೆಂದು ಆಶಿಸುತ್ತಿದ್ದಾರೆ.

ಈ ಕುರಿತು ಕತ್ರಿನಾ ಮಾತನಾಡುತ್ತಾ, ನಮಸ್ತೆ ಲಂಡನ್, ಪಾರ್ಟ್ ನರ್, ವೆಲ್ ಕಮ್, ಸಿಂಗ್ ಈಸ್ ಕಿಂಗ್ ಚಿತ್ರಗಳಲ್ಲಿ ಬೇಕಾದಷ್ಟು ಹಾಸ್ಯ ರಸವಿದೆ. ಆದರೆ ನನ್ನ ದೃಷ್ಟಿಯಲ್ಲಿ ಪ್ರೇಕ್ಷಕರನ್ನು ನಾನು ನಕ್ಕುನಲಿಸಿದ್ದು ಕಡಿಮೆ ಎಂತಲೇ ಹೇಳಬೇಕು. ಮುಂಬರುವ ನನ್ನ ಚಿತ್ರಗಳಲ್ಲಾದರೂ ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ನಗಿಸಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದೇನೆ. ಇಂತಹ ಚಿತ್ರದಲ್ಲಿ ಕತ್ರಿನಾ ಇದ್ದಾರೆ ಎಂದರೆ ಪ್ರೇಕ್ಷಕರು ಹಾಯಾಗಿ ಚಿತ್ರ ನೋಡಿ ನಗುವಂತಾಗಬೇಕು ಎಂದರು.

ಅಂದಹಾಗೆ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ನಡುವಿನ ಪ್ರೇಮಾಯಣಕ್ಕೆ ಇಷ್ಟರಲ್ಲೇ ತೆರೆ ಬೀಳಲಿದೆ. ಶೀಘ್ರದಲ್ಲೇ ಈಕೆಯನ್ನು ಸಲ್ಮಾನ್ ಮದುವೆಯಾಗುತ್ತಿದ್ದಾರೆ. ಹೀಗಂತ ಬಾಲಿವುಡ್ ನಲ್ಲಿ ವದಂತಿಗಳು ಹರಡುತ್ತಿದ್ದರೂ ಕತ್ರಿನಾ ಮಾತ್ರ ಇದಕ್ಕೆಲ್ಲಾ ಸೊಪ್ಪು ಹಾಕುತ್ತಿಲ್ಲ. ಆಕೆ ತನ್ನ ವೃತ್ತಿ ಜೀವನಕ್ಕಷ್ಟೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada