ರಣಬೀರ್ ಕಪೂರ್ ಗೆ ಇನ್ನೂ ಮದುವೆ ಆಗಿಲ್ಲ ಏಕೆ?

By Mahesh

ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ.. ರಾತ್ರಿ ಪೂರಾ ಅವಳ ನೆನಪಲ್ಲಿ ನಿದ್ದೆ ಬರ್ತಿಲ್ಲ ಎಂದು ಬಾಲಿವುಡ್ ನ ಸುರಸುಂದರಾಗ ರಣಬೀರ್ ಕಪೂರ್ ಗುಣುಗುತ್ತಿದ್ದಾನಂತೆ. ಹೌದಾ.. ಏನೊ ಗೊತ್ತಿಲ್ಲ. ಹಾಗಂತ ಸುದ್ದಿ. ರಣಬೀರ್ ಮ್ಯಾರೇಜ್ ಸ್ಟೋರಿ ಓದೋಣ ಬನ್ನಿ

ರಣಬೀರ ಯಾಕೆ ಇನ್ನೂ ಮದುವೆಯಾಗಿಲ್ಲ? ಇನ್ನೂ ಸರಿಯಾದ ಹುಡುಗಿ ಸಿಕ್ಕಿಲ್ಲ ಎಂಬ ಸಾಮಾನ್ಯ ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ, ರಣಬೀರ್ ಗೆ ಕಪೂರ್ ಖಾನ್ ದಾನ್ ಗೆ ಸೊಸೆಯಾಗುವ ಗುಣ ಇನ್ನೂ ಯಾರಲ್ಲ ಕಂಡಿಲ್ಲವಂತೆ. ಅಷ್ಟಕ್ಕೂ ಮದುವೆಗಾಗಿ ಹುಡುಗಿ ನೋಡುವ ಕಷ್ಟದ ಕೆಲಸವನ್ನು ನನ್ನ ಅಪ್ಪ ಅಮ್ಮನಿಗೆ ಬಿಟ್ಟಿದ್ದೇನೆ ಅವರು ಹೇಳಿದ ಹಾಗೆ ಕೇಳ್ತೀನಿ ಎನ್ನುತ್ತಾನೆ ಹಾಲಗಲ್ಲದ ಚಿತ್ತ ಚೋರ.

ಬಾಲಿವುಡ್ ಏನು ಹೇಳುತ್ತೆ ಅಯ್ಯೋ ಬಿಡಿ ರಣಬೀರ್ ಕಥೆ ನಮ್ಗೆ ಗೊತ್ತಿಲ್ಲ್ವ ದೀಪಿಕಾ ಅವನಿಗೆ ಕೈ ಕೊಟ್ಟ ಮೇಲೆ ದೇವದಾಸ್ ಥರಾ ಆಗಿಬಿಟ್ಟಿದ್ದ ಪಾಪ, ಈಗ ಪರವಾಗಿಲ್ಲ. ಆಮೇಲೆ ಬಿಪಾಶಾ ಜೊತೆ ಕೂಡಾ ಹೆಸರು ತಗಲಿ ಹಾಕಿಕೊಂಡಿದ್ದು, ಇಬ್ಬರಿಗೂ ಜೋಡಿ ಸರಿ ಹೊಂದಲ್ಲ ಬಿಡಿ. ಮತ್ತೆ ಕತ್ರೀನಾ ಹಿಂದೆ ಮುಂದೆ ಓಡಾಡಿ ಸಲ್ಲೂ ಕೋಪಕ್ಕೆ ಗುರಿಯಾಗಿದ್ದ. ಅದಕ್ಕೆ ಈಗ ಯಾರ ಹಿಂದೆ ಬೀಳೋದು ಬೇಡ ಅಂಥ ಅವನ ಅಪ್ಪ ಅಮ್ಮನ ಹುಡುಗಿರ ಹಿಂದೆ ಬಿಟ್ಟಿದ್ದಾನೆ.

ನಮ್ಮ ಮಗ ಏನೂ ದೀಪಿಕಾ ಹೆಸರಲ್ಲಿ ಕೊರಗುತ್ತಿಲ್ಲ. ಅವನಿಗೆ ತಕ್ಕ ಜೋಡಿ ಹುಡುಕುವ ಜವಾಬ್ದಾರಿ ನಮ್ಮ ಮೇಲಿದೆ. ಮೇಲಾಗಿ ಕಪೂರ್ ಕುಟುಂಬದ ಸೊಸೆಯಾಗಿ ಮೆರೆಯುವ ಕನ್ಯೆ ಬೇಕಿದೆ. ಹುಡುಕಾಟ ಜಾರಿಯಲ್ಲಿದೆ ಎನ್ನುತ್ತಾರೆ ತಾರಾದಂಪತಿ ರಿಷಿ ಕಪೂರ್ ಹಾಗು ನೀತು ಸಿಂಗ್. ರಣಬೀರ ಮಾತ್ರ ಬಚ್ನಾ ಹೇ ಹಸಿನೋ ಲೋ ಮೇ ಆಗಯಾ ಎಂದು ಹಾಡುತ್ತಾ ತಿರುಗುತ್ತಿದ್ದಾನಂತೆ.

More from Filmibeat

English summary
Bollywood actor Ranbir Kapoor has the looks and has established himself as an actor, but he is still single.Ranbir seems to have decided to please his parents(Rishi Kapoor and Nitu Singh) by marrying the girl of their choice who suites to Kapoor family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X