ಅಯ್ಯೋ, ಸಲ್ಮಾನ್ ಖಾನ್ ಕಣ್ಣಿಗೆ ಏನಾಯ್ತು?
ಈ ಚಿತ್ರ ನೋಡಿದರೆ ಅಯ್ಯೋ ಏನಾಯ್ತಪ್ಪ ಸಲ್ಮಾನ್ ಕಣ್ಣಿಗೆ ಎಂಬ ಅನುಮಾನ, ದಿಗ್ಭ್ರಮೆ ಒಟ್ಟಿಗೆ ಆಗುತ್ತವೆ. ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನಡೆಸಿಕೊಡುತ್ತಿರುವ ಸಲ್ಮಾನ್ ಕಳೆದಒಂದು ವಾರದಿಂದ ಕಪ್ಪು ಕನ್ನಡ ಬಿಚ್ಚಿಲ್ಲ. ಮೊನ್ನೆ ಕಪ್ಪು ಕನ್ನಡಕ ಬಿಚ್ಚಿದಾಗ ಈ ರಹಸ್ಯ ಬಯಲಾಗಿದೆ.
ಇಷ್ಟಕ್ಕೂ ಸಲ್ಮಾನ್ ಕಣ್ಣಿಗೆ ಏನಾಗಿದೆ? ಯಾರಾದರೂ ಗೂಸಾ ಕೊಟ್ಟರೆ?ಕಣ್ಣಿಗೆ ಮದ್ರಾಸ್ ಐ ಸೋಂಕು ತಗುಲಿದೆಯೇ? ಕಣ್ಣಿಗೇನಾದರೂ ಶಸ್ತ್ರ ಚಿಕಿತ್ಸೆ ನಡೆಯಿತೇ? ಹೀಗೆ ಸಾಲು ಸಾಲು ಪ್ರಶ್ನೆಗಳು ಬುಗಿಲೆದ್ದಿವೆ. ಬಲ್ಲ ಮೂಲಗಳು ಹೇಳುವ ಪ್ರಕಾರ, ಅವರ ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆಯಂತೆ.
ಇದೊಂದು ವಯೋ ಸಹಜ ಸಮಸ್ಯೆಯಾಗಿದ್ದು, ಕಣ್ಣಿನ ಕೆಳಭಾಗದಲ್ಲಿ ಗಾಳಿ ತುಂಬಿದಂತೆ ಉಬ್ಬಿಕೊಳ್ಳುತ್ತದೆ. ಇದರಿಂದ ವಯಸ್ಸು ಹೆಚ್ಚಾದಂತೆ ಕಾಣುತ್ತದೆ. ಕಣ್ಣಿನ ಕೆಳ ಭಾಗದಲ್ಲಿ ತುಂಬಿಕೊಂಡಿರುವ ಕೊಬ್ಬಿನ ಅಂಶವನ್ನು ಒಂದು ಸಣ್ಣ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯುತ್ತಾರೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ Blepharoplasty ಎನ್ನುತ್ತಾರೆ.
ಈ ಚಿಕಿತ್ಸೆಯನ್ನು ಒಂದರಿಂದ ಮೂರು ಗಂಟೆಗಳ ಕಾಲ ಮಾಡಲಾಗುತ್ತದೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ಕಣ್ಣು ಮತ್ತೆ ಸಹಜ ಸ್ಥಿತಿಗೆ ಬರಲು ಒಂದು ವಾರ ಬೇಕಾಗುತ್ತದೆ. ಆದರೆ ಸಲ್ಮಾನ್ 'ಬಿಗ್ ಬಾಸ್' ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಕಾರಣ ಅನಿವಾರ್ಯವಾಗಿ ಬರಲೇಬಾಕಾಗಿತ್ತು. ಆಗ ಸಲ್ಲು ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವುದು ಬಯಲಾಗಿದೆ.
ವಯಸ್ಸು ಮರೆಮಾಚಿಸುವ ಈ ರೀತಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವುದು ಸಲ್ಮಾನ್ ಖಾನ್ ಅವರೇ ಮೊದಲಿಗರಲ್ಲ. ಈ ಹಿಂದೆ ರಾಣಿ ಮುಖರ್ಜಿ, ಸಂಗೀತಾ ಬಿಜಲಾನಿ, ಪ್ರಿಯಾಂಕಾ ಚೋಪ್ರಾ, ಬಿಪಶಾ ಬಸು, ಕತ್ರಿನಾ ಕೈಫ್ ಸೇರಿದಂತೆ ಬಹುತೇಕ ಬಾಲಿವುಡ್ ತಾರೆಗಳು ಈ ಶಸ್ತ್ರ ಚಿಕಿತ್ಸೆಯನ್ನು ಒಳಗಾಗಿದ್ದಾರೆ.


Click it and Unblock the Notifications











