ಟ್ವಿಟ್ಟರ್‌ನಲ್ಲಿ ಸಚಿನ್ ದಾಖಲೆ ಸರಿಗಟ್ಟಿದ ಶಾರುಖ್ ಖಾನ್!

By Rajendra

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (45) ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ! ಆದರೆ ಕ್ರಿಕೆಟ್‌ನಲ್ಲಿ ಅಲ್ಲ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಎಂಬುದು ವಿಶೇಷ. ಈಗ ಸಚಿನ್ ಅಷ್ಟೇ ಅಭಿಮಾನಿಗಳು ಶಾರುಖ್‌ರನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಹತ್ತು ಲಕ್ಷ ಮಂದಿ ಈಗ ಶಾರುಖ್‌ರನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ವರ್ಷದ ಹಿಂದೆ ಶಾರುಖ್ ಟ್ವಿಟ್ಟರ್ ಖಾತೆ ತೆರೆದ 24 ಗಂಟೆಗಳಲ್ಲಿ 10,000ಕ್ಕೂ ಅಧಿಕ ಅಭಿಮಾನಿಗಳು ಅವರನ್ನು ಫಾಲೋ ಮಾಡಿದರು.

ಈಗಾಗಲೆ ಸಚಿನ್ ತೆಂಡೂಲ್ಕರ್, ಲೇಖಕ/ರಾಜಕಾರಣಿ ಶಶಿ ತರೂರ್ ಹಾಗೂ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಕೂಡ ಇದೇ ದಾಖಲೆ ಮಾಡಿದ್ದಾರೆ. "ಹತ್ತು ಲಕ್ಷ ಸಂಖ್ಯೆಯ ಗುರಿತಲುಪಿರುವ ಬಗ್ಗೆ ಮೈ ಜುಂ ಎನ್ನುತ್ತಿದೆ. ಎಲ್ಲರಿಗೂ ಧನ್ಯವಾದಗಳು. ಲವ್ ಯು" ಎಂದು ಶಾರುಖ್ ಟ್ವೀಟ್ ಮಾಡಿ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಕಳೆದ ತಿಂಗಳು ಪ್ರಿಯಾಂಕಾ ಚೋಪ್ರಾ ಟ್ವಿಟ್ಟರ್‌ನಲ್ಲಿ ಹತ್ತು ಲಕ್ಷದ ಗಡಿಯನ್ನು ಮುಟ್ಟಿದ್ದರು. ಈ ಮೂಲಕ ಬಾಲಿವುಡ್‌ನಲ್ಲಿ ಈ ದಾಖಲೆ ಸಂಖ್ಯೆ ತಲುಪಿದ ಪ್ರಥಮ ತಾರೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅಮಿತಾಬ್ ಬಚ್ಚನ್‌ಗೆ ಈಗಾಗಲೆ 897,659 ಫಾಲೋವರ್ಸ್ ಇದ್ದು ಸಲ್ಮಾನ್ ಖಾನ್‌ರನ್ನು 817,568 ಮಂದಿ ಫಾಲೋ ಮಾಡುತ್ತಿದ್ದಾರೆ. ಇವರು ಶೀಘ್ರದಲ್ಲೆ ಹತ್ತು ಲಕ್ಷ ದಾಖಲೆ ಸರಿಗಟ್ಟುವ ತವಕದಲ್ಲಿದ್ದಾರೆ. (ಪಿಟಿಐ)

More from Filmibeat

English summary
He generated over 10,000 followers on Twitter within 24 hours of joining the micro blogging site last year. Now, Bollywood’s King Shahrukh Khan has created another record by crossing the one million mark on twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X