ಮಂಗಳೂರು ಕುಡಿ ಶಿಲ್ಪಾ ಶೆಟ್ಟಿ ಪ್ರೆಗ್ನೆಂಟ್

ಶಿಲ್ಪಾ ಈ ಹಿಂದೆಯೇ ಅಮ್ಮನಾಗುವ ಬಯಕೆ ವ್ಯಕ್ತಪಡಿಸಿದ್ದಳು. ನನಗೆ ಮಕ್ಕಳು, ನನ್ನ ಕುಟುಂಬ ಎಂದರೆ ಎಲ್ಲಿಲ್ಲದ ಪ್ರಾಣ. ಅದಕ್ಕಾಗಿ ನರ್ಸರಿಯನ್ನು ತೆರೆದಿದ್ದೇನೆ. ಮಗುವಿನ ಬೆಡ್ ರೂಂ ಸಿದ್ಧವಾಗಿದೆ. ನನಗೆ ಇಬ್ಬರು ಮಕ್ಕಳು ಬೇಕೇ ಬೇಕು. ಕುಂದ್ರಾ ಓಕೆ ಅನ್ನಬೇಕು ಅಷ್ಟೆ ಎಂದು 2009ರಲ್ಲಿ ಸಂದರ್ಶನವೊಂದರಲ್ಲಿ ಶಿಲ್ಪಾ ತಮ್ಮ ಮನದಾಸೆಯನ್ನು ಹೊರಹಾಕಿದ್ದರು.
ಶಿಲ್ಪಾ ಇತ್ತೀಚಿನ ದಿನಗಳಲ್ಲಿ ಕ್ಲಿನಿಕ್ ಒಂದಕ್ಕೆ ಎಡತಾಕುತ್ತಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿ ಅತ್ಯಂತ ಹರ್ಷಚಿತ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂರು ತಿಂಗಳು ತುಂಬುವ ಮುನ್ನವೇ ಸುದ್ದಿಯನ್ನು ಸಾರ್ವತ್ರಿಕಗೊಳಿಸುವುದು ಬೇಡವೆಂಬುದು ಶಿಲ್ಪಾ ಲೆಕ್ಕಾಚಾರ. ಆದರೆ ಅತ್ಯಾಪ್ತ ನೆಂಟರಿಷ್ಟರು, ಗೆಳೆಯರ ಬಳಗಕ್ಕೆ ಈ ಸುದ್ದಿ ತಲುಪಿಯಾಗಿದೆ.
ಶಿಲ್ಪಾ, ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಒಡತಿ. ನಿನ್ನೆ (ಮೇ 11) ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ತಮ್ಮ ತಂಡ ಸೋಲುಣ್ಣುತ್ತಿರುವಾಗ ತಿಳಿ ನೀಲಿ ಬಣ್ಣದ ಸೀರೆಯುಟ್ಟಿದ್ದ ಶಿಲ್ಪಾ ಪತಿಯೊಂದಿಗೆ ಸ್ಟೇಡಿಯಂನಲ್ಲಿ ವಿರಾಜಮಾನರಾಗಿದ್ದರು.


Click it and Unblock the Notifications











