twitter
    For Quick Alerts
    ALLOW NOTIFICATIONS  
    For Daily Alerts

    ಮಂಗಳೂರು ಕುಡಿ ಶಿಲ್ಪಾ ಶೆಟ್ಟಿ ಪ್ರೆಗ್ನೆಂಟ್

    By Srinath
    |

    Shilpa- Raj Kundra
    ಇದು ನಿಜ. ಕನ್ನಡತಿ ಶಿಲ್ಪಾಶೆಟ್ಟಿ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಎರಡು ವರ್ಷದ ಹಿಂದೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾಗಿದ್ದ ಶಿಲ್ಪಾ ತಮ್ಮ ಚೊಚ್ಚಲ ಪಡಿಯಚ್ಚನ್ನು ಸ್ವಾಗತಿಸಲು ಆನಂದತುಂದಲಿತರಾಗಿದ್ದಾರೆ. ಆದರೆ ಈ ಹಿಂದೆ, ಕವಿತಾ ಎಂಬಾಕೆಯನ್ನು ವರಿಸಿದ್ದ ಕುಂದ್ರಾ 2009ರ ಸೆಪ್ಟೆಂಬರ್ ನಲ್ಲಿ ದಿಲೀನಾ ಎಂಬ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

    ಶಿಲ್ಪಾ ಈ ಹಿಂದೆಯೇ ಅಮ್ಮನಾಗುವ ಬಯಕೆ ವ್ಯಕ್ತಪಡಿಸಿದ್ದಳು. ನನಗೆ ಮಕ್ಕಳು, ನನ್ನ ಕುಟುಂಬ ಎಂದರೆ ಎಲ್ಲಿಲ್ಲದ ಪ್ರಾಣ. ಅದಕ್ಕಾಗಿ ನರ್ಸರಿಯನ್ನು ತೆರೆದಿದ್ದೇನೆ. ಮಗುವಿನ ಬೆಡ್ ರೂಂ ಸಿದ್ಧವಾಗಿದೆ. ನನಗೆ ಇಬ್ಬರು ಮಕ್ಕಳು ಬೇಕೇ ಬೇಕು. ಕುಂದ್ರಾ ಓಕೆ ಅನ್ನಬೇಕು ಅಷ್ಟೆ ಎಂದು 2009ರಲ್ಲಿ ಸಂದರ್ಶನವೊಂದರಲ್ಲಿ ಶಿಲ್ಪಾ ತಮ್ಮ ಮನದಾಸೆಯನ್ನು ಹೊರಹಾಕಿದ್ದರು.

    ಶಿಲ್ಪಾ ಇತ್ತೀಚಿನ ದಿನಗಳಲ್ಲಿ ಕ್ಲಿನಿಕ್ ಒಂದಕ್ಕೆ ಎಡತಾಕುತ್ತಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿ ಅತ್ಯಂತ ಹರ್ಷಚಿತ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂರು ತಿಂಗಳು ತುಂಬುವ ಮುನ್ನವೇ ಸುದ್ದಿಯನ್ನು ಸಾರ್ವತ್ರಿಕಗೊಳಿಸುವುದು ಬೇಡವೆಂಬುದು ಶಿಲ್ಪಾ ಲೆಕ್ಕಾಚಾರ. ಆದರೆ ಅತ್ಯಾಪ್ತ ನೆಂಟರಿಷ್ಟರು, ಗೆಳೆಯರ ಬಳಗಕ್ಕೆ ಈ ಸುದ್ದಿ ತಲುಪಿಯಾಗಿದೆ.

    ಶಿಲ್ಪಾ, ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಒಡತಿ. ನಿನ್ನೆ (ಮೇ 11) ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ತಮ್ಮ ತಂಡ ಸೋಲುಣ್ಣುತ್ತಿರುವಾಗ ತಿಳಿ ನೀಲಿ ಬಣ್ಣದ ಸೀರೆಯುಟ್ಟಿದ್ದ ಶಿಲ್ಪಾ ಪತಿಯೊಂದಿಗೆ ಸ್ಟೇಡಿಯಂನಲ್ಲಿ ವಿರಾಜಮಾನರಾಗಿದ್ದರು.

    English summary
    Shilpa Shetty and Raj Kundra have something other than Rajasthan Royals' victories to cheer for. The couple, who tied the knot after a two year long courtship in 2009, are ready to welcome a new member in their family.
    Thursday, May 12, 2011, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X